“ಸರ್ಕಾರ ಕೂಡಲೇ ಅತ್ಯಾಚಾರಿಯನ್ನು ಬಂಧಿಸಬೇಕು” : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಮಾರ್ಚ್,27,2021(www.justkannada.in) : ದೂರು ದಾಖಲಾದರೂ, FIR ಹಾಕಿದ್ದರೂ ಅತ್ಯಾಚಾರ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂಬ ಕಳಂಕ, ಕರ್ನಾಟಕಕ್ಕೆ ಬೇಡ, ಅದೇನಿದ್ದರೂ ಯುಪಿಯ ಯೋಗಿ ಆಡಳಿತಕ್ಕಿರಲಿ. ಸರ್ಕಾರ ಕೂಡಲೇ ಅತ್ಯಾಚಾರಿಯನ್ನು ಬಂಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಒತ್ತಾಯಿಸಿದೆ.Government-Immediately-rapist-Arrest-State-Congress-Tweet ಲಂಚ, ಮಂಚದ ಸರ್ಕಾರದಿಂದ ಈಗಾಗಲೇ ಕರ್ನಾಟಕದ ಮರ್ಯಾದೆ ದೇಶದ ಎದುರು ಹರಾಜಾಗಿದೆ. ದೂರು ದಾಖಲಾಗಿದೆ. ಎಫ್ ಐ ಆರ್ ಹಾಕಲಾಗಿದೆ. ಇನ್ನೂ ಏಕೆ ಅತ್ಯಾಚಾರವೆಸಗಿದ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿಲ್ಲ? ಎಂದು ಪ್ರಶ್ನಿಸಿದೆ.Government-Immediately-rapist-Arrest-State-Congress-Tweet ಸರ್ಕಾರಕ್ಕೆ ಭಯವೇ? ಮಾಜಿ ಸಚಿವರೆಂದ ಮಾತ್ರಕ್ಕೆ ಕಾನೂನಿಗೆ ಅಂತೀತರೇ? ಬಸವರಾಜ ಬೊಮ್ಮಾಯಿ ಅವರೇ ಈ ರಕ್ಷಣಾತ್ಮಕ ಆಟ ಸಾಕು, ಕೂಡಲೇ ಬಂಧಿಸಿ, ರಾಜ್ಯದ ಮಾನ ಉಳಿಸಿ ಎಂದು ಒತ್ತಾಯಿಸಿದ್ದಾರೆ.

key words : Government-Immediately-rapist-Arrest-State-Congress-Tweet