ಪ್ರವಾಹ ಬರಲಿದೆ ಎಂದು ಗೊತ್ತಿದ್ರೂ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ- ಮಾಜಿ ಸಿಎಂ ಸಿದ‍್ಧರಾಮಯ್ಯ ಟೀಕೆ.

ಕಲ್ಬುರ್ಗಿ,ಜುಲೈ,14,2022(www.justkannada.in): ಪ್ರವಾಹ ಬರಲಿದೆ ಎಂದು ಗೊತ್ತಿದ್ದರೂ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕ ಸಿದ‍್ಧರಾಮಯ್ಯ ಟೀಕಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಮುಂಚಿತವಾಗಿ ಯಾವ ಕ್ರಮ ತೆಗೆದುಕೊಳ್ಳಲ್ಲ. ಜನರಿಗೆ, ರೈತರಿಗೆ ನಷ್ಟವಾದ ಮೇಲೆ ಅದನ್ನು ನೋಡೋಕೆ ಹೋಗ್ತಾರೆ. ಕಳೆದ ಎರಡು ವಾರದಿಂದ ಮಳೆ ಬೀಳುತ್ತಿದೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಜಿಲ್ಲೆಗಳಿಗೆ ಹೋಗಿಲ್ಲ, ಮುಖ್ಯಮಂತ್ರಿಗಳು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೋದ ಮೇಲೆ ಇವರು ಹೊರಟಿದ್ದಾರೆ. ಪ್ರವಾಹ ಬರಲಿದೆ ಎಂದು ಗೊತ್ತಿದ್ದೂ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಕೂಡಲೇ ಪ್ರವಾಹದಿಂದ ಹಾನಿಗೊಳಗಾದ ಜನ, ಜಾನುವಾರು ಜೀವ ನಷ್ಟ, ಬೆಳೆ, ಆಸ್ತಿಪಾಸ್ತಿ ಹಾನಿಯನ್ನು ಲೆಕ್ಕಹಾಕಿ ಪರಿಹಾರ ನೀಡಬೇಕು. 2019 ರ ಪ್ರವಾಹದಲ್ಲಿ ಹಾನಿಗೀಡಾದ ಮನೆಗಳಿಗೇ ಇನ್ನೂ ಪರಿಹಾರ ಕೊಟ್ಟಿಲ್ಲ. 2020 ರಲ್ಲಿ ಬಂದ ಪ್ರವಾಹದಿಂದ ನಷ್ಟಕ್ಕೀಡಾದವರಿಗೂ ಪರಿಹಾರ ಕೊಟ್ಟಿಲ್ಲ. ಹಿಂದೆ ಪ್ರವಾಹ ಬಂದಾಗ ಊರುಗಳ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು, ಆದರೆ ಸ್ಥಳಾಂತರ ಕಾರ್ಯ ಇನ್ನೂ ಮಾಡಿಲ್ಲ, ಹೀಗಾಗಿ ಮತ್ತೆ ಪ್ರವಾಹ ಬಂದಾಗ ಅಲ್ಲಿನ ಜನ ತೊಂದರೆ ಎದುರಿಸುತ್ತಾರೆ. ಇದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಆರ್.ಎಸ್.ಎಸ್ ಆಳ ಮತ್ತು ಅಗಲ ಕೃತಿಯನ್ನು ದಾಖಲೆ ಸಮೇತ ಬರೆದಿದ್ದಾರೆ.

ಆರ್.ಎಸ್.ಎಸ್ ಆಳ ಮತ್ತು ಅಗಲ ಕೃತಿಯನ್ನು ದಾಖಲೆ ಸಮೇತ ಬರೆದಿದ್ದಾರೆ. ಯಾವ ಯಾವ ಕಾಲದಲ್ಲಿ ಹೆಡ್ಗೆವಾರ್, ಗೋಲ್ವಾಲ್ಕರ್, ಸಾವರ್ಕರ್ ಆರ್.ಎಸ್.ಎಸ್ ಸಂಘಟನೆ ಬಗ್ಗೆ ಏನು ಹೇಳಿದ್ದರು ಅದನ್ನೇ ದಾಖಲೆ ಸಹಿತ ಬರೆದಿದ್ದಾರೆ. ಆರ್.ಎಸ್.ಎಸ್ ನವರಿಗೆ ಸತ್ಯ ಹೇಳಿದ್ರೆ ಯಾಕೆ ಕೋಪ? ಸತ್ಯ ಹೇಳಿದವರ ಮೇಲೆ ಕೇಸ್ ಹಾಕಿಸೋದು ಮಾಡ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದು ಧಕ್ಕೆಯಾಗ್ತಿದೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ನಿರ್ಬಂಧ ಹೇರಲು ಇವರು ಯಾರು? ದೇಶದ ಮೂಲಭೂತ ಸ್ವರೂಪ ಬದಲಾವಣೆ ಮಾಡಲು ಸಂಸತ್ತಿಗೂ ಅಧಿಕಾರ ಇಲ್ಲ ಎಂದು ಸಿದ್ಧರಾಮಯ್ಯ ಗುಡುಗಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಅಶ್ವತ್ ನಾರಾಯಣ್ ವಿರೋಧ ಪಕ್ಷದಲ್ಲಿದ್ದರು ಅಲ್ವಾ? ಆಗ ಏನಾದ್ರೂ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂದು ಅವರು ಮಾತನಾಡಿದ್ರಾ? ಈಗ ತಮ್ಮ ಕಾಲದಲ್ಲಿ ಹಗರಣ ಬೆಳಕಿಗೆ ಬಂದ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲೂ ಆಗಿತ್ತು ಅಂದರೆ ಹೇಗೆ? ಆಗೇನು ಕಡ್ಲೆಪುರಿ ತಿಂತಿದ್ರಾ? ಮಾಹಿತಿ ಇದ್ದಿದ್ದರೆ ಆಗಲೇ ಸದನದಲ್ಲಿ ಪ್ರಸ್ತಾಪ ಮಾಡಬಹುದಿತ್ತು, ನ್ಯಾಯಾಲಯಕ್ಕೂ ಹೋಗಬಹುದಿತ್ತು ಎಂದು ಸಿದ್ಧರಾಮಯ್ಯ  ಟಾಂಗ್ ನೀಡಿದರು.

ಸ್ನೇಹಿತರು, ಹಿತೈಷಿಗಳು ಸೇರಿ ಆಚರಣೆ ಮಾಡುತ್ತಿದ್ದಾರೆ. ಈಗ್ಯಾಕಪ್ಪ ಭಯ?

ಸಿದ್ಧರಾಮೋತ್ಸವದ ಬಗ್ಗೆ ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನನ್ನ ಹುಟ್ಟು ಹಬ್ಬದ ಆಚರಣೆಗೆ ದಾವಣಗೆರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂದು ಬಿಜೆಪಿಗೆ ಸೋಲಿನ ಭಯ ಹತ್ತಿಕೊಂಡಿದೆ. ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬಕ್ಕೆ ನನ್ನನ್ನೂ ಕರೆದಿದ್ರೂ, ಹೇಗಿದ್ರೂ ಇದೇನು ಸರ್ಕಾರಿ ಕಾರ್ಯಕ್ರಮ ಅಲ್ಲ, ಒತ್ತಾಯ ಮಾಡ್ತಿದ್ದಾರೆ ಎಂದು ನಾನೂ ಹೋಗಿದ್ದೆ. ಈಗ ನನಗೆ 75 ವರ್ಷ ತುಂಬುತ್ತಿದೆ ಎಂದು ಸ್ನೇಹಿತರು, ಹಿತೈಷಿಗಳು ಸೇರಿ ಆಚರಣೆ ಮಾಡುತ್ತಿದ್ದಾರೆ. ಈಗ್ಯಾಕಪ್ಪ ಭಯ? ಸಿದ್ದರಾಮೋತ್ಸವ ಎಂದು ಬರೆದಿದ್ದು ಮಾಧ್ಯಮಗಳು, ನಾವ್ಯಾರು ಅದನ್ನು ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಇದು “ಸಿದ್ದರಾಮಯ್ಯ 75ನೇ ಅಮೃತೋತ್ಸವ” ಕಾರ್ಯಕ್ರಮ ಎಂದರು.

ಕಲಬುರ್ಗಿಯಿಂದ ಶಹಪುರಕ್ಕೆ ತೆರಳುವಾಗ ಮಾರ್ಗದಲ್ಲಿ ಸಿದ್ದರಾಮಯ್ಯ ಅವರು ಗೋಗಿ ಗ್ರಾಮದಲ್ಲಿ ಬುದ್ಧ ಪುತ್ಥಳಿಗೆ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಿದರು. ಶಾಸಕ ದರ್ಶನಾಪುರ, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಜರಿದ್ದರು.

Key words: government – flood – former CM -Siddaharamaiah

ENGLISH SUMMARY…

Govt. didn’t take any measures despite knowing about floods: Former CM Siddaramaiah
Kalaburagi, July 14, 2022 (www.justkannada.in): “The State Government didn’t take any precautionary measures despite it knew that a flood situation would arise,” alleged leader of the opposition in the assembly Siddaramaiah.
Speaking to the reporters at the Kalaburagi airport today, he said, “The State Government has failed to take any precautionary measure to prevent the flood situation. They will visit the place and the people only after people lose everything. The state is witnessing heavy rainfall from the last two weeks. But, the District In-charge Ministers didn’t visit their districts. They have started moving only after the CM visited Kodagu and Dakshina Kannada. The government didn’t take any measure despite it knew about the situation. The government should provide compensation immediately according to the loss faced by the victims. They have not provided compensation to the 2019 flood victims,” he said.
In his response to a book on RSS, Siddaramaiah expressed his view the book shows the truth. “The book comprises facts along with documents of whatever has been said by the earlier RSS leaders Hegdewar, Golwalkar, Savarka, etc. Why do they get angry if we tell the truth? A case is slapped against those who speak the truth. It is killing of freedom of speech. Who are they to restrict the rights given to us by the constitution? Even the parliament doesn’t has any right to change the origin of our country,” he said.
Keywords: Siddaramaiah/ flood/ State govt.