ಸರ್ಕಾರಕ್ಕೆ ತಾಕತ್ತಿದ್ರೆ ಜಮೀರ್ ಅಹ್ಮದ್​ರನ್ನು ಪಾಕ್ ಗೆ ಗಡಿಪಾರು ಮಾಡಲಿ-ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಆಕ್ರೋಶ.

ದಕ್ಷಿಣ ಕನ್ನಡ,ನವೆಂಬರ್,20,2023(www.justkannada.in): ಮುಸ್ಲೀಮರನ್ನ ಬಿಜೆಪಿ ನಾಯಕರು ದ್ವೇಷಿಸುತ್ತಿದ್ದರು. ಆದರೆ ಈಗ ಬಿಜಿಪಿ ಶಾಸಕರು ಈಗ ಸ್ಪೀಕರ್ ಸಾಬ್ ಎಂದು ನಮಸ್ಕರಿಸುತ್ತಿದ್ದಾರೆ. ಹೀಗೆ ಮಾಡಿದ್ದು ಕಾಂಗ್ರೆಸ್ ಎಂದು ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ರಾಜಶೇಖರಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ವಜ್ರದೇಹಿ ರಾಜಶೇಖರಾನಂದಶ್ರೀಗಳು,  ಜಮೀರ್ ಅಹ್ಮದ್​ ಖಾನ್ ರನ್ನು ಮೊದಲು ಪಾಕ್​ಗೆ ಗಡಿಪಾರು ಮಾಡಬೇಕು. ಸರ್ಕಾರಕ್ಕೆ ತಾಕತ್ತಿದ್ರೆ ಜಮೀರ್ ಅಹ್ಮದ್​ರನ್ನು ಗಡಿಪಾರು ಮಾಡಲಿ. ಇಲ್ಲೆಲ್ಲೂ ಅಲ್ಲ, ಜಮೀರ್​ರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: government -deport Jameer- Ahmad – Pakistan – Rajasekharananda Swamiji