Friday, September 18, 2026

BDA Apartments

Home Front Page ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ: ಕಾಂಗ್ರೆಸ್ ಬಹಳ ದಿನ ಉಳಿಯಲ್ಲ- ಆರ್.ಅಶೋಕ್.

ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ: ಕಾಂಗ್ರೆಸ್ ಬಹಳ ದಿನ ಉಳಿಯಲ್ಲ- ಆರ್.ಅಶೋಕ್.

ಬೆಂಗಳೂರು,ಮೇ,10,2024 (www.justkannada.in):  ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ.  ಕಾಂಗ್ರೆಸ್ ಬಹಳ ದಿನ ಉಳಿಯಲ್ಲ. ಅಂತಿಮ ದಿನಗಳನ್ನ ಎಣಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಪ್ರಜ್ವಲ್ ಪ್ರಕರಣ ಮೈತ್ರಿ ಮೇಲೆ ಪರಿಣಾಮ ಬೀರಲ್ಲ ಮೈತ್ರಿ ಮುಂದುವರಿಸಿಕೊಂಡು ಹೋಗತ್ತೇವೆ. ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವ ರೀತಿ ಆಗಬೇಕು ಎಂದು ಚರ್ಚೆಮಾಡುತ್ತೇವೆ ಎಂದರು.ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ ashok.R

ಬಹಳ ದಿನ ಕಾಂಗ್ರೆಸ್ ಉಳಿಯಲ್ಲ. ಅಂತಿಮ ದಿನಗಳನ್ನ ಎಣಿಸುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ ಕೊಡುತ್ತಿದೆ. ಇದನ್ನ ಖಂಡಿಸುತ್ತೇನೆ. ನಾವು ಹೋರಾಟ ಮಾಡುತ್ತೇವೆ.  ಸರ್ಕಾರ ಅಭಿವೃದ್ದಿಗೆ ನಯಾ ಪೈಸೆ ನೀಡಿಲ್ಲ. ಸರ್ಕಾರವನ್ನ ಕಾಂಗ್ರೆಸ್ ನಾಯಕರೇ ಬೀಳಿಸುತ್ತಾರೆ.ಬರ ಪರಿಹಾರ ನ್ಯಾಯುತವಾಗಿ ಹಂಚಿಲ್ಲ ಎಂದು ಆರ್ ಅಶೋಕ್ ಆರೋಪಿಸಿದರು.

Key words: Government, Congress, bjp, R. Ashok