ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ: ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ- ಮಾಜಿ ಸಿಎಂ ಬೊಮ್ಮಾಯಿ.

ಬೆಂಗಳೂರು,ಸೆಪ್ಟಂಬರ್,22,2023(www.justkannada.in):  ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರ ಎಡವಿದೆ.  ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಸವರಾಜ ಬೊಮ್ಮಾಯಿ ‘ನಮ್ಮ ವಕೀಲರು ಕೋರ್ಟ್ ಪ್ರೊಸೀಡಿಂಗ್ ನೋಡಿದ್ದಾರೆ. ರಾಜ್ಯದ ಲೀಗಲ್ ಟೀಂ ಸರಿಯಾಗಿ ವಾದ ಮಾಡಿಲ್ಲ. ಟ್ರಿಬ್ಯುನಲ್ ನಾರ್ಮ್ಸ್ ಬಗ್ಗೆ,‌ ತಮಿಳುನಾಡಿನಲ್ಲಿ ಎಷ್ಟು ನೀರು ಬಳಕೆಯಾಗಿದೆ ಎಂಬುದನ್ನು ಹೇಳಿಲ್ಲ.
ಹೀಗಾಗಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ‌. ಈಗಾಗಲೇ ಮಂಡ್ಯ, ಚಾಮರಾಜನಗರ, ಬೆಂಗಳೂರಿನಲ್ಲಿ ಸೇರಿ ಎಲ್ಲಾ ಕಡೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದು, ಇಂದಿ‌ನ ಸಭೆಯಲ್ಲಿ ಹೋರಾಟದ ರೂಪು ರೇಷೆ  ನಿರ್ಧರಿಸುತ್ತೇವೆ ಎಂದರು.

Key words: Government – Cauvery issue-Former CM-Basavaraj Bommai.