ಮುಂಬೈ,ಮಾರ್ಚ್,14,2026 (www.justkannada.in): ಗೂಡ್ಸ್ ರೈಲು ರೈಲು ಡಿಕ್ಕಿಯಾಗಿ ಮೂವರು ಯುವಕರು ಪ್ರಾಣ ತೆತ್ತಿರುವ ಘಟನೆ ಮಹರಾಷ್ಟ್ರದ ಪಾಲ್ಘರ್ ನಗರದಲ್ಲಿ ನಡೆದಿದೆ.
ಸ್ವಪ್ನೀಲ್ ಶೈಲೇಶ್ ಪಾಲಂಡೆ, ಕುನಾಲ್ ಕುಮಾರ್ ದುಬ್ಲಾ, ಅಪ್ರೋಜ್ ಖಲೀಲ್ ಶೇಖ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪೊಲೀಸರ ಲಾಠಿಚಾರ್ಜ್ ಗೆ ಹೆದರಿ ಓಡಿ ಹೋಗುತ್ತಿದ್ದ ವೇಳೇ ಮೂವರಿಗೆ ಗೂಡ್ಸ್ ರೈಲು ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.
ಓಲ್ಡ್ ಪಾಲ್ಘರ್ ನಲ್ಲಿರುವ ಜೈನ ದೇವಸ್ಥಾನದ ಬಳಿ ಗುಂಪು ಸೇರಿತ್ತು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಮಯದಲ್ಲಿ ಮೃತ ಮೂವರು ಯುವಕರು ರೈಲ್ವೆ ಹಳಿ ಕಡೆ ಓಡಿದ್ದು ಯುವಕರಿಗೆ ಗೂಡ್ಸ್ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೊಲೀಸರ ವಿರುದ್ದ ಮೃತರ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: Goods train, collision, Three youths, die







