ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಕುಸಿತ

ಬೆಂಗಳೂರು, ಆಗಸ್ಟ್ 28, 2022 (www.justkannada.in): ಚಿನ್ನದ ಬೆಲೆಯಲ್ಲಿ ಬರೋಬ್ಬರಿ 380 ರೂ. ಇಳಿಕೆಯಾದರೆ ಬೆಳ್ಳಿ ಬೆಲೆಯಲ್ಲಿ 600 ರೂ. ಕುಸಿತಕಂಡಿದೆ. ಈ ಮೂಲಕ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.

22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 380 ರೂ. ಇಳಿಕೆಯಾಗಿದ್ದು, 47,300 ರೂ.ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇದ್ದುದು 51,600 ರೂ. ಆಗಿದೆ. ಬೆಂಗಳೂರು- 47,350 ರೂ, ಚೆನ್ನೈ- 48,050 ರೂ. ಮುಂಬೈ- 47,300 ರೂ, ದೆಹಲಿ- 47,450 ರೂ, ಕೊಲ್ಕತ್ತಾ- 47,300 ರೂ, ಹೈದರಾಬಾದ್- 47,300 ರೂ ಇದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದ್ದು, ಇಂದು 10 ಗ್ರಾಂ 51,650 ರೂ, ಗೆ ಇಳಿಕೆಯಾಗಿದೆ. ಚೆನ್ನೈ- 52,420 ರೂ, ಮುಂಬೈ- 51,600 ರೂ, ದೆಹಲಿ- 51,760 ರೂ, ಕೊಲ್ಕತ್ತಾ- 51,600 ರೂ, ಹೈದರಾಬಾದ್- 51,600 ರೂ ಆಗಿದೆ.

ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 600 ರೂ. ಇಳಿಕೆಯಾಗಿದೆ. ಈ ಮೂಲಕ 1 ಕೆಜಿ ಬೆಳ್ಳಿ ಬೆಲೆ 55,400 ರೂ. ಇದ್ದುದು ಇಂದು 54,800 ರೂ. ಆಗಿದೆ.