ಶುಭ ಶುಕ್ರವಾರ: ಸ್ಯಾಂಡಲ್ ವುಡ್’ನಲ್ಲಿ ಮತ್ತೆ ಚಿತ್ರಗಳ ರಿಲೀಸ್ ಸಂಭ್ರಮ

ಬೆಂಗಳೂರು, ಫೆಬ್ರವರಿ 11, 2022 (www.justkannada.in): ಕೊರೊನಾ 3ನೇ ಅಲೆ ಲಾಕ್ ಡೌನ್ ಬಳಿಕ ಮತ್ತೆ ಸ್ಯಾಂಡಲ್ ವುಡ್ ಕಳೆಗಟ್ಟಿದೆ.

ಥಿಯೇಟರ್ ಗಳಲ್ಲಿ ಶೇ.100ರಷ್ಟು ಅವಕಾಶ ಕೊಟ್ಟ ನಂತರ ಸ್ಯಾಂಡಲ್ ವುಡ್ ನಲ್ಲಿ ಚಿತ್ರಗಳ ಬಿಡುಗಡೆ ಸರಣಿ ಆರಂಭವಾಗಿದೆ.

ಹೌದು. ಕೊರೋನಾ ಕಾಲಘಟ್ಟದ ನಂತರ ಕನ್ನಡ ಚಿತ್ರರಂಗ ಮತ್ತೆ ಕಳೆಗಟ್ಟಿದೆ. ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.

ಎಂದಿನಂತೆ ಶುಭ ಶುಕ್ರವಾರದಂದು ಚಂನದವನದಲ್ಲಿ ಸಂಭ್ರಮ ಮನೆಮಾಡಿದ್ದು, ಬಹುನಿರೀಕ್ಷಿತ ಸಿನಿಮಾಗಳಾದ ಲವ್‌ ಮಾಕ್ಟೇಲ್‌-2 ಹಾಗೂ ‘ಫೋರ್‌ ವಾಲ್ಸ್‌ ಟು ನೈಟೀಸ್‌’ ತೆರೆಗೆ ಅಪ್ಪಳಿಸಲಿವೆ.