ಮೈಸೂರು,ಅಕ್ಟೋಬರ್,10,2025 (www.justkannada.in): ಮೈಸೂರಿನಲ್ಲಿ ನಡೆದಿದ್ದ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಕಾರ್ತಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾರ್ತಿಕ್ ಗ ಜೈಲು ಶಿಕ್ಷೆ ಆಗಿದ್ದರೂ ಹೈಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದು ಓಡಾಡಿಕೊಂಡಿದ್ದ.
ಆರೋಪಿ ಕಾರ್ತಿಕ್ ಕೊಳ್ಳೆಗಾಲದಲ್ಲಿ ಮಹಿಳೆಯ ಹತ್ಯೆಗೆ ಯತ್ನಿಸಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆ ಮೇಲೆ ಅಟ್ಯಾಕ್ ಮಾಡಿದ್ದ. ಆಕೆಯನ್ನ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡುವ ಯತ್ನ ಮಾಡಿದ್. ಈ ಸಂಬಂಧ ಪೊಲೀಸರು ಆತನ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ಆರೋಪ ಸಾಭೀತಾದ ಹಿನ್ನೆಲೆ ಶಿಕ್ಷೆ ಕೂಡ ವಿಧಿಸಲಾಗಿತ್ತು22/2/2025 ರಂದು ಕೊಳ್ಳೆಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯ ನಾಲ್ಕು ವರ್ಷ ಶಿಕ್ಷೆ ವಿಧಿಸಿತ್ತು.
ಕೆಳ ಹಂತದ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕಾರ್ತಿಕ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆದು ಹೊರ ಬಂದ ಬಳಿಕ ಕಾರ್ತಿಕ್ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಬಸ್ ಹತ್ತಿ ಕೊಳ್ಳೆಗಾಲಕ್ಕೆ ತೆರಳಿದ್ದನು
ನಂತರ ಪೊಲೀಸರ ತನಿಖೆಯಿಂದ ಆತ ಕೊಳ್ಳೆಗಾಲದಲ್ಲಿ ಇರುವುದು ಪತ್ತೆಯಾಗಿದ್ದು ಬಳಿಕ ಪೊಲೀಸರು ಅರೆಸ್ಟ್ ಮಾಡಿಕೊಂಡು ಬರುವಾಗ ಪೊಲೀಸರ ಮೇಲೆಯೇ ಕಾರ್ತಿಕ್ ಹಲ್ಲೆ ಯತ್ನ ಮಾಡಿದ್ದನು. ಈ ವೇಳೆ ಪೊಲೀಸರು ಕಾರ್ತಿಕ್ ಕಾಲಿಗೆ ಗುಂಡೇಟು ಹೊಡೆದಿದ್ದರು. ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಹಿನ್ನೆಲೆಯಲ್ಲಿ ಎಸ್ ಐ ಜಯಕೀರ್ತಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Key words: Mysore, Girl, rape , murder case, Accused Arrest