ದಕ್ಷಿಣ ಕನ್ನಡ,ಆಗಸ್ಟ್,23,2025 (www.justkannada.in): ಧರ್ಮಸ್ಥಳ ಪ್ರಕರಣ ಸಂಬಂಧ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ ಐಟಿ ಬಂಧಿಸಿರುವುದನ್ನ ಸ್ವಾಗತಿಸುವೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ಪ್ರಕರಣ ಮುಚ್ಚಿ ಹಾಕಲು ತನಿಖೆ ದಿಕ್ಕು ತಪ್ಪಿಸಲು ಸಂಚು ನಡೆದಿದೆ ದೂರುದಾರ ಚಿನ್ನಯ್ಯನ್ನನ್ನ ಮಂಪರು ಪರೀಕ್ಷೆಗೆ ಒಳಪಡಿಸಲಿ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ . ಆನೇಕ ಕಡೆ ಶೋಧ ಕಾರ್ಯ ಆಗಿದೆ ಯಾರು ಸಂಚು ಮಾಡಿದ್ದಾರೆಂದು ಎಸ್ಐಟಿಯವರು ಹೇಳಬೇಕು ಎಂದರು.
ಮೊದಲ ದಿನದಿಂದಲೂ ಸಂಚು ನಡೆದಿದೆ ಪ್ರಕರಣ ಮುಚ್ಚಿ ಹಾಕಲ ತನಿಖೆ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆದಿದೆ ಚಿನ್ನಯ್ಯ ಎಷ್ಟು ವರ್ಷದಿಂದ ಪರಿಚಯ ಅಂತಾ ಉತ್ತರ ಕೊಡ್ತೇನೆ. ದೂರುದಾರ ಬಂಧನ ಸ್ವಾಗತ ಮಾಡುತ್ತೇನೆ. ಎಸ್ ಐ ಟಿ ತನಿಖೆಗೆ ಕರೆದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.
Key words: Complainant, Mask Man. Arrest, Welcome, Girish Mattannanavar