ಜಗದೀಶ್ ಶೆಟ್ಟರ್ ಪರ ಗೀತಾ ಶಿವರಾಜ್ ಕುಮಾರ್ ಪ್ರಚಾರ:  45 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ.

ಹುಬ್ಬಳ್ಳಿ,ಮೇ,6,2023(www.justkannada.in): ಭಾರಿ ಕುತೂಹಲ ಮೂಡಿರಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ  ಗೀತಾ ಶಿವರಾಜ್ ಕುಮಾರ್ ಅವರು ಇಂದು ಪ್ರಚಾರ ನಡೆಸಿದರು.

ಗೀತಾ ಶಿವರಾಜ್ ಕುಮಾರ್ ಹಾಗೂ ನಟ ಶಿವರಾಜ್ ಕುಮಾರ್ ಅವರು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ಪ್ರಚಾರದಲ್ಲಿ ತೊಡಗಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಜಗದೀಶ್ ಶೆಟ್ಟರ್ ಅತ್ಯಂತ ಸರಳ ಸಜ್ಜನಿಕೆ ವ್ಯಕ್ತಿ, ಇಷ್ಟೊಂದು ಸರಳತೆ‌ ನಾನು ಯಾರಲ್ಲೂ ನೋಡಿಲ್ಲ. ಜಗದೀಶ್ ಶೆಟ್ಟರ್  ಕುಟುಂಬದ ಜೊತೆ ನಮಗೆ ಬಹಳಷ್ಟು ಅವಿನಾಭಾವ ಸಂಬಂಧವಿದೆ ಎಂದರು.

35 ರಿಂದ 45 ಸಾವಿರ ಮತದ ಅಂತರದಿಂದ ಜಗದೀಶ್  ಶೆಟ್ಟರನ್ನು ಗೆಲ್ಲಿಸಬೇಕು, ಕಾಂಗ್ರೆಸ್ ಪಕ್ಷ ದೊಡ್ಡ ವ್ಯಕ್ತಿಗೆ ಟಿಕೇಟ್ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಗೀತಾ ಶಿವರಾಜ್ ಕುಮಾರ್  ವಿಶ್ವಾಸ ವ್ಯಕ್ತಪಡಿಸಿದರು.

Key words: Geetha Shivraj Kumar -campaign –congress-Jagdish Shettar