ಎಸ್ .ಸಿ ಮತ್ತು ಎಸ್ .ಟಿ ಮೀಸಲಾತಿ ಹೆಚ್ಚಳ ಬಗ್ಗೆ ಗೆಜೆಟ್ ನೋಟಿಫಿಕೇಷನ್ : ಸದನದಲ್ಲಿ ಮಂಡಿಸಿ ಚರ್ಚೆ-ಸಿಎಂ ಬೊಮ್ಮಾಯಿ.

ಹುಬ್ಬಳ್ಳಿ,ಅಕ್ಟೋಬರ್,24,2022(www.justkannada.in): ಎಸ್ .ಸಿ ಮತ್ತು ಎಸ್ .ಟಿ ಮೀಸಲಾತಿ ಹೆಚ್ಚಳ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದ್ದು, ಸದನದಲ್ಲಿ ಮಂಡಿಸಿ ಚರ್ಚೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೀಸಲಾತಿ ಹೆಚ್ಚಳ ಕುರಿತ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೀಸಲು ಹೆಚ್ಚಳ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದೇವೆ. ಸುಗ್ರೀವಾಜ್ಞೆಯನ್ನು ಉಭಯ ಸದನದಲ್ಲಿ ಮಂಡನೆ ಮಾಡುತ್ತೇವೆ. ವಿಧೇಯಕ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗುವುದು. ಬಳಿಕ ಸದನದಲ್ಲಿ ಬಿಲ್ ಪಾಸ್​ ಮಾಡಲಾಗುವುದು ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯದಿಂದ 2ಎ ಮೀಸಲಾತಿಗೆ  ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಸಿಎಂ ಬಸವರಾಜ ಬೊಮ್ಮಾಯಿ, ಮೀಸಲಾತಿ ಬಗ್ಗೆ ಬೇರೆ ಬೇರೆ ಆಯೋಗದ ಚರ್ಚೆ ಹಂತದಲ್ಲಿದೆ. ಆಯೋಗದ ವರದಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮುಸ್ಲಿಮರ ಮೀಸಲಾತಿ ವಾಪಸ್​​ ಗೆ ಕೆಲ ಶಾಸಕರ ಆಗ್ರಹ  ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮುಸ್ಲಿಮರ ಮೀಸಲಾತಿ ವಾಪಸ್​ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಈ ಬಗ್ಗೆ ಶಾಸಕರು ಹೇಳಿದ್ದು ವೈಯಕ್ತಿಕ ಅಭಿಪ್ರಾಯ ಅಷ್ಟೇ. ಮುಸ್ಲಿಂ ಮೀಸಲಾತಿ ಬಗ್ಗೆ ಸಂವಿಧಾನದಡಿ ಚರ್ಚೆ ನಡೆಯಲಿದೆ  ಎಂದು ತಿಳಿಸಿದರು.

Key words: Gazette notification -regarding -increase – SC and ST reservation-CM Bommai.

ENGLISH SUMMARY…

Gazette notification on increasing reservation for SC/ST: Bill to tabled in cabinet and discussed – CM Bommai
Hubballi, October 24, 2022 (www.justkannada.in): “A gazette notification on increasing the reservation for SC/STs has been issued. It will be tabled in the cabinet and discussed,” observed Chief Minister Basavaraj Bommai.
Speaking at Hubballi today, he informed that the gazette notification has been issued. “We will present the bill in both the houses and discussed in detail in the cabinet. After that it will be passed in the cabinet,” he explained.
In his reply over the demand for reservation to Panchamasali community under 2A, the Chief Minister informed that this issue is under discussion under various Commissions, and the government would take measures after receiving the report.
Responding to a question on the demand by several MLAs regarding withdrawal of reservation for the minorities, Basavaraj Bommai informed that he would not like to say anything. “It is only the personal opinion of those MLAs who said it. A discussion will be held as per the constitution about reservation for minorities,” he informed.
Keywords: Chief Minister Basavaraj Bommai/ SC-ST/ reservation/ increase/ gazette notification