“ತೋಟಗಾರಿಕೆ, ರೇಷ್ಮೆ ಬೆಳೆಗಳ ಕುರಿತು ತಿಂಗಳಿಗೊಂದು ವಿಚಾರ ಸಂಕಿರಣ” : ಸಚಿವ ಶಂಕರ್

ಬೆಂಗಳೂರು,ಜನವರಿ,31,2021(www.justknnada.in) : ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಸುಧಾರಿಸಿ ರೈತರಿಗೆ ಲಾಭದಾಯಕ ಬೆಳೆಗಳಾಗಿ ಮಾಡಲು ತಿಂಗಳಿಗೆ ಒಂದು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಶಂಕರ್ ಅವರು ತಿಳಿಸಿದರು.jkಇನ್ನು ಪ್ರತಿ ತಿಂಗಳು ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲು ಚಿಂತಿಸಲಾಗುತ್ತಿದೆ. ವಿಚಾರ ಸಂಕಿರಣದಲ್ಲಿ ಬೆಳೆಯಲ್ಲಿ ಲಾಭದಾಯಕ ಹಾಗೂ ಸಂಕಷ್ಟದಲ್ಲಿರುವ ರೈತರು ಭಾಗವಹಿಸಿ ತಮ್ಮ ಅನಿಸಿಕೆ ಹಾಗೂ ಸರ್ಕಾರದಿಂದ ಬೇಕಿರುವ ಸಹಾಯಗಳ ಬಗ್ಗೆ ಚರ್ಚಿಸಬೇಕು ಎಂದರು.Gardening-silk crops-About-Once-a month-Think-Radiation-Minister-Shankar

ತೋಟಗಾರಿಕೆ ಬೆಳೆ ಹಾಗೂ ರೈತರ ತೊಂದರೆಗಳ ಬಗ್ಗೆ ತಿಳಿದುಕೊಳ್ಳಲು ಜಿಲ್ಲೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದು ತಿಳಿಸಿದರು.

key words : Gardening-silk crops-About-Once-a month-Think-Radiation-Minister-Shankar