ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅಪ್ರಾಪ್ತರು ಸೇರಿ ಮೂವರ ವಿರುದ್ದ ಕೇಸ್ ದಾಖಲು

ಬೆಳಗಾವಿ,ಮೇ,21,2025 (www.justkannada.in):  ಅಪ್ರಾಪ್ತೆಯನ್ನು ರೆಸಾರ್ಟ್  ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರು ಸೇರಿ ಮೂವರ ವಿರುದ್ಧ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಸಂಬಂಧ ಬೆಳಗಾವಿಯ ಉಜ್ವಲ ನಗರದ ಸಾಕೀಬ್ ನಿಜಾಮಿ, ಓರ್ವ ಅಪ್ರಾಪ್ತ ಬಂಧನವಾಗಿದ್ದು, ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಗೆ ಶೋಧಕಾರ್ಯ ಮುಂದುವರೆದಿದೆ. ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯ ರೆಸಾರ್ಟ್‌ ‌ನ ರೂಂಗೆ ಕರೆದೊಯ್ದು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಪಾಂಗೂಳ ಗಲ್ಲಿಯ 15 ವರ್ಷದ ಅಪ್ರಾಪ್ತೆಯನ್ನು ಇಬ್ಬರು ಅಪ್ರಾಪ್ತರು ಕರೆದೊಯ್ದಿದ್ದು, ಇಬ್ಬರೂ ಸೇರಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರೆಸಾರ್ಟ್‌‌ ನ ರೂಂ ಬುಕ್ ಮಾಡಿ ಕೊಟ್ಟು ಕೃತ್ಯಕ್ಕೆ ನೆರವು ನೀಡಿದವನನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಪ್ರಕರಣ ಕುರಿತು ಈ ಮೊದಲು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿತ್ತು. ಈಗ ಪ್ರಕರಣ ಬೆಳಗಾವಿ ‌ಮಾರ್ಕೆಟ್ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ.

Key words: Gang rape, minor,  Case, registered, Belgaum