ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಅಭಿಮಾನಿಯ ಆಸೆ ಈಡೇರಿಸಲು ಮುಂದಾದ ಮಾಜಿ ಸಿಎಂ ಸಿದ್ಧರಾಮಯ್ಯ…

Promotion

ಮಂಡ್ಯ.ಫೆಬ್ರವರಿ,18,2021(www.justkannada.in): ಮಂಡ್ಯ ತಾಲ್ಲೂಕಿನ ಕೋಡಿದೊಡ್ಡಿ ಗ್ರಾಮದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು ಡೆತ್ ನೋಟ್ ನಲ್ಲಿ  ‘ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು’ ಎಂದು ಬರೆದಿದ್ದಾನೆ.jk

ರಾಮಕೃಷ್ಣ ಎಂಬಾತನೇ ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆಗೆ ಶರಣಾಗಿರುವ ಕೋಡಿದೊಡ್ಡಿ ಗ್ರಾಮದ ಯುವಕ. ಇನ್ನು ಡೆತ್ ನೋಟ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು ಎಂದು ಮನವಿ ಮಾಡಿದ್ದಾನೆ.

ನನ್ನನ್ನ ಎಲ್ಲರೂ ದಯವಿಟ್ಟು ಕ್ಷಮಿಸಿ. ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೀನಿ. ನಾನು ಎಲ್ಲರಿಗೂ ನೋವು ಕೊಟ್ಟಿದ್ದೇನೆ. ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ. ಅಣ್ಣನಿಗೆ ತಮ್ಮನಾಗಲಿಲ್ಲ. ಸ್ನೇಹಿತರಿಗೆ ಒಳ್ಳೆಯ ಗೆಳೆಯನಾಗಲಿಲ್ಲ. ನನ್ನ ಹುಡುಗಿಗೆ ಒಳ್ಳೆಯ ಸಂಗಾತಿ ಆಗಲಿಲ್ಲ. ಆದ್ದರಿಂದ ನಿಮ್ಮನ್ನು ಬಿಟ್ಟು ದೂರ ಹೋಗುತ್ತಿದ್ದೇನೆ ಎಲ್ಲರೂ ಕ್ಷಮಿಸಿ ಎಂದು  ಡೆತ್ ನೋಟ್ ನಲ್ಲಿ ಬರೆದಿದ್ದಾನೆ.

ಹಾಗೆಯೇ ನನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ಬರಬೇಕು ಎಂದು ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಯ ಆಸೆ ಈಡೇರಿಸಲು ಮಾಜಿ ಸಿಎಂ ಸಿದ್ಧರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

Rastrapitha-Mahatma Gandhi- Remembrance- Former CM- Siddaramaiah
siddaramaih#profile..

ಅಭಿಮಾನಿಯ ಈ ಕೋರಿಕೆ ಈಡೇರಿಸಲು ಸಿದ್ದರಾಮಯ್ಯ ಇಂದು ಮಧ್ಯಾಹ್ನ 12.30ಕ್ಕೆ ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

Key words: Youth- suicide -writing – Death Note-Former CM -Siddaramaiah -fulfill –his fan