ಪಟಾಕಿ ಸಿಡಿದು ಯುವಕ ಸಾವು: ಮೂವರು ಮಕ್ಕಳಿಗೆ ಗಾಯ.

Promotion

ಚಿಕ್ಕಮಗಳೂರು,ನವೆಂಬರ್,15,2023(www.justkannada.in): ಸಂಭ್ರಮದ ದೀಪಾವಳಿ ಹಬ್ಬ ಮುಗಿದಿದ್ದು ಹಬ್ಬದಲ್ಲಿ ಪಟಾಕಿ ಸಿಡಿಸುವ ವೇಳೆ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿ. ಈ ಮಧ್ಯೆ ಪಟಾಕಿ ಸಿಡಿದು 30 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ವ್ಯಾಪ್ತಿಯ ಸುಣ್ಣದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪ್ರದೀಪ್(30) ಮೃತಪಟ್ಟ ಯುವಕ. ಪ್ರದೀಪ್ ಚೇರ್ ಕೆಳಗೆ ಪಟಾಕಿ ಬಾಕ್ಸ್ ಇಟ್ಟುಕೊಂಡು  ಕುಳಿತಿದ್ದ. ಈ ವೇಳೆ ಪಟಾಕಿ ಬಾಕ್ಸ್ ಗೆ ಕಿಡಿ ತಗುಲಿದ್ದು ಆಟಂಬಾಂಬ್ ಸೇರಿ ಪಟಾಕಿಗಳು ಸಿಡಿದಿವೆ.  ಪಟಾಕಿ ಸಿಡಿದ ರಭಸಕ್ಕೆ ಯುವಕ ಪ್ರದೀಪ್ ಐದು ಅಡಿ ಹಾರಿದ್ದು ಪರಿಣಾಮ ಮೃತಪಟ್ಟಿದ್ದಾನೆ.

ಘಟನೆಯಲ್ಲಿ  ಮತ್ತೋರ್ವ ಯುವಕನಿಗೆ ಗಾಯಗಳಾಗಿದೆ. ಅಲ್ಲದೆ ಮೂವರು ಮಕ್ಕಳಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ .

Key words: Youth death- firecrackers- Three children -injured