ಗೂಗಲ್ ಮೀಟ್, ಫೇಸ್ ಬುಕ್ ನಲ್ಲಿ ಯುವತಿಯರಿಗೆ ಗಾಳ: ಲೈಂಗಿಕವಾಗಿ ಬಳಸಿಕೊಂಡು ಹಣ ಕೀಳುತ್ತಿದ್ದ ಆರೋಪಿ ಅಂದರ್.  

Promotion

ಮೈಸೂರು,ಮೇ,18,2022(www.justkannada.in): ಗೂಗಲ್ ಮೀಟ್, ಫೇಸ್ ಬುಕ್ ನಲ್ಲಿ ಯುವತಿಯರಿಗೆ ಗಾಳ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಹಣ ಕೀಳುತ್ತಿದ್ದ ಆರೋಪಿಯನ್ನ ಮೈಸೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಗುರುಸಿದ್ದಪ್ಪ ಪುತ್ರ ಶಿವಪ್ರಕಾಶ್ ಬಿ.ಜಿ. ಬಂಧಿತ ಆರೋಪಿ. ಈತ ವಿಕೃತ ಕಾಮುಕನಾಗಿದ್ದು, ಗೂಗಲ್ ಮೀಟ್, ಫೇಸ್ ಬುಕ್ ನಲ್ಲಿ ಯುವತಿಯರಿಗೆ ಗಾಳ ಹಾಕುತ್ತಿದ್ದ. ಯುವತಿಯರನ್ನ  ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದ ಈ ಆರೋಪಿ ಬಲೆಗೆ ಬೀಳುವ ಯುವತಿಯರನ್ನ ಲೈಂಗಿಕವಾಗಿ ಬಳಸಿಕೊಂಡು, ವಿಡಿಯೋ ಮಾಡಿಟ್ಟುಕೊಂಡು ಹಣ ಕೀಳುತ್ತಿದ್ದ.

ಈ ನಡುವೆ ಮೈಸೂರು ಮೂಲದ ಯುವತಿಯ ಜೊತೆ  ಶಿವಪ್ರಕಾಶ್ ಸ್ನೇಹ, ಪ್ರೀತಿ, ನಾಟಕ‌ವಾಡಿ, ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷದವರೆಗೆ ಹಣ ಪಡೆದಿದ್ದನು. ಇದರಿಂದ ನೊಂದ ಯುವತಿಯಿಂದ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಪ್ರೌವೃತ್ತರಾದ ಜಿಲ್ಲಾ ಪೊಲೀಸರು ಆರೋಪಿ ಶಿವಪ್ರಕಾಶ್ ನನ್ನು ಬಂಧಿಸಿದ್ದಾರೆ.

Key words: Young Women -Google Meet- Facebook-sexually –abusing-arrest.