ನೀವು ಗೋಮಾಂಸ  ತಿನ್ನುತ್ತೀರಿ ಅಂತ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ..? ಸಿದ್ದರಾಮಯ್ಯ ವಿರುದ್ದ ಪ್ರತಾಪ್ ಸಿಂಹ ಕಿಡಿ…

Promotion

ಮೈಸೂರು,ಡಿಸೆಂಬರ್25,2020(www.justkannada.in): ಕೊಡವರು ಗೋಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.Teachers,solve,problems,Government,bound,Minister,R.Ashok

ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು  ಗೋಮಾಂಸ ತಿನ್ನಬಹುದು. ಆದ್ರೆ ಅವರ ಕಾರಣಕ್ಕೆ ಇಡೀ ಕೊಡವರನ್ನ ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ನೀವು ಗೋಮಾಂಸ ತಿನ್ನುತ್ತೀರಿ ಅಂತ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ..? ಎಂದು ಮಾಜಿ ಸಿಎಂ  ಸಿದ್ದರಾಮಯ್ಯಗೆ ಸಂಸದ ಪ್ರತಾಪ್‌ ಸಿಂಹ ಪ್ರಶ್ನೆ ಹಾಕಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೇ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗಿಲ್ಲ. ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್ ನವರು ಮಾತ್ರ ಮಾತನಾಡೋಕೆ ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಗೋಮಾತೆಯನ್ನ ಎರಡನೇ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಬೇಡಿ. ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ದೀರಾ. ಆದ್ರೆ ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಎಂದು ತಿಳಿಸಿದರು.

ಮಾಸ್ಕ್ ಹೆಸರಿನಲ್ಲಿ ಜನರಿಗೆ ಅನಗತ್ಯ ತೊಂದರೆ ಕೊಡಬೇಡಿ: ಇನ್ನಾದ್ರು ಜನರು ಓಡಾಡಲು ಬಿಡಿ…

ಕಳೆದ ಮಾರ್ಚ್‌ನಿಂದಲೂ ಜನರು ನಿರ್ಬಂಧದ ವ್ಯವಸ್ಥೆಯಲ್ಲೆ ಇದ್ದಾರೆ. ಜನರನ್ನ ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸ್ತಿರಾ.? ಇನ್ನಾದ್ರು ಜನರು ಓಡಾಡಲು ಬಿಡಿ. ಮಾಸ್ಕ್ ಹೆಸರಿನಲ್ಲಿ ಜನರಿಗೆ ಅನಗತ್ಯ ತೊಂದರೆ ಕೊಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.you-eat-beef-mp-pratap-simha-outrage-against-former-cm-siddaramaiah

ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿ ಬಂದಿದ್ದೇನೆ. ಎಲ್ಲಾ ಕಡೆ ಕೊರೋನಾ ರೂಪಾಂತರದ ಬಗ್ಗೆ ಚರ್ಚೆ ಇದೆ. ಆದ್ರೆ ಜನರನ್ನ ಹೆಚ್ಚು ದಿನ‌ ನಿರ್ಬಂಧ ಮಾಡೋಕೆ ಆಗೋಲ್ಲ. ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಕಡ್ಡಾಯ ಮಾಡಿ. ಆದ್ರೆ ಮಾಸ್ಕ್ ಹೆಸರಿನಲ್ಲಿ ಕಾರು, ಬೈಕ್ ನಿಲ್ಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದರು.

Key words: You –eat- beef –MP-Pratap Simha –outrage against –former cm-siddaramaiah