ನಾನಿಲ್ಲದೆ ನೀವು ಏನು ಮಾಡೋಕೆ ಆಗಲ್ಲ- ಎಪಿಎಂಸಿ ಕಾರ್ಯದರ್ಶಿಗೆ ವೇದಿಕೆ ಕಾರ್ಯಕ್ರಮದಲ್ಲೇ ಶಾಸಕ ಜಿಟಿ ದೇವೇಗೌಡ ಅವಾಜ್…

Promotion

ಮೈಸೂರು,ಫೆಬ್ರವರಿ,4,2021(www.justkannada.in): ನಾನು ಮನಸ್ಸು ಮಾಡಿದ್ರೆ ಮೈಸೂರು ಎಪಿಎಂಸಿ ಏನು ಬೇಕಾದರೂ ಮಾಡ್ತೇನೆ. ನಾನಿಲ್ಲದೆ ನೀವು ಏನು ಮಾಡೋಕೆ ಆಗಲ್ಲ. ನನ್ನ ಗಮನಕ್ಕೆ ತರದೆ ಸರ್ಕಾರಕ್ಕೆ ಏನೇ ಗಮನ ಹರಿಸಿದ್ರೂ ಏನು ಆಗಲ್ಲ. ನಿನಗೆ ನೇರವಾಗೇ ಹೇಳ್ತೇನೆ.  ಹೀಗೆ ಮೈಸೂರು ಎಪಿಎಂಸಿ ಕಾರ್ಯದರ್ಶಿಗೆ ವೇದಿಕೆ ಕಾರ್ಯಕ್ರಮದಲ್ಲೇ ಅವಾಜ್ ಹಾಕಿದ್ದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡರು.jk

ಹೌದು, ಮೈಸೂರಿನಲ್ಲಿ ನಡೆದ  ಎಪಿಎಂಸಿ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ  ಜಿಟಿ ದೇವೆಗೌಡ  ಈ ರೀತಿ ಎಂಪಿಎಂಸಿ ಕಾರ್ಯದರ್ಶಿಗೆ ಅವಾಜ್ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಇದುವರೆಗೆ ನಾನು ನಿಮ್ಮಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದ್ದೇನೆ ಅಂದ್ರೆ ಚೆನ್ನಾಗಿ ನಡೆಸಿಕೊಂಡು ಹೋಗಲಿ ಅನ್ನೋ ಉದ್ದೇಶ. ನಾನು ಈ ಕ್ಷೇತ್ರದ ಶಾಸಕ. ಎಪಿಎಂಸಿ  ಸಂಪೂರ್ಣ ಅಭಿವೃದ್ಧಿ ಪಡಿಸಿರೋನು ನಾನು. ನಮ್ಮ ಉಸ್ತುವಾರಿಗಳು ಎಸ್ ಟಿ ಸೋಮಶೇಖರ್ ನನಗೆ ಬಹಳ ಆತ್ಮೀಯರು. ನೀವು ನನ್ನ ಬಿಟ್ಟು ನೇರವಾಗಿ ಕೆಲಸ ಮಾಡಿಸಿಕೊಳ್ಳೋಕೆ ಅವರ ಹತ್ತಿರ ಹೋಗ್ತೀರಾ. ಅವರೇ ಕರೆ ಮಾಡಿ ನನಗೆ ಹೇಳ್ತಾರೆ. ನಿಮ್ಮವರು ಬಂದಿದ್ರೂ ಅಂತ. ನೀವ್ಯಾರು ನನ್ನ ಬಿಟ್ಟು ಮೈಸೂರು ಎಪಿಎಂಸಿ ವಿಚಾರವಾಗಿ ಸರ್ಕಾರದಿಂದ ಏನು ಕೆಲಸ ಮಾಡಿಸಿಕೊಳ್ಳೋಕೆ ಆಗೋದಿಲ್ಲ ಎಂದು ಹೇಳಿದರು. You can't do- anything -without –me- Mysore -APMC Secretary- MLA-GT Deve Gowda -Awaj ...

ಇನ್ನು ತಮ್ಮ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ  ನಡೆಸಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ  ಜಿ.ಟಿ ದೇವೇಗೌಡ, ನಾನು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಪ್ರತ್ಯೇಕವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸುತ್ತೇನೆ. ಈಗ ಬೇಡ ಎಂದರು.

Key words: You can’t do- anything -without –me- Mysore -APMC Secretary- MLA-GT Deve Gowda -Awaj …