ಯಡಿಯೂರಪ್ಪ ಅವರಿಂದ ಕೆಲವು ವಿಚಾರದಲ್ಲಿ ದೂರ ಇದ್ದೇನೆ : ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು,ಏಪ್ರಿಲ್,02,2021(www.justkannada.in) : ನಾನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ಕೆಲವು ವಿಚಾರದಲ್ಲಿ ದೂರ ಇದ್ದೇನೆ. ಯಡಿಯೂರಪ್ಪ ಮತ್ತು ನಾನು ಕಾನೂನು ತಜ್ಞರಲ್ಲ. ತಪ್ಪಾಗಿದೆ ಅದನ್ನ ಹೇಳಿದ್ದೀನಿ. ನೋಡೋಣ ಏನಾಗುತ್ತೆ ಅಂತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.Illegally,Sand,carrying,Truck,Seized,arrest,driverಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸುದ್ದಿಗೋಷ್ಠಿ ಮಾಡಲು ಸಂಘವೇ ಶಕ್ತಿ. ಮೊದಲಿನಿಂದಲೂ ನಾನು ಸಂಘಕ್ಕೆ ಲಾಯಲ್. ಅಂದು ಬಿಜೆಪಿ ಅಧ್ಯಕ್ಷನಾಗಿ ನನ್ನ ಮತ್ತು ಕೆಜಿಪಿ ಅಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ಇಬ್ಬರ ನಡುವೆ ವಾದ ವಿವಾದವಾಗಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರೇ, ಕನಸಿನಲ್ಲೂ ಅದನ್ನೆಲ್ಲ ಯೋಚನೆ ಮಾಡಬೇಡಿ

ನಾನೋಬ್ಬ ಪಕ್ಷದ ಕಾರ್ಯಕರ್ತ ಅಷ್ಟೆ. ನಮ್ಮಪ್ಪ ಅಡಿಕೆ ಮಂಡಿ ಗುಮಾಸ್ತ. ನಮ್ಮಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡೋಳು. ಆದರೆ, ಪಕ್ಷ ನನ್ನನ್ನ ಡಿಸಿಎಂ ಸ್ಥಾನ ನೀಡಿದೆ.  ಹಾಗಾಗಿ, ಇದನ್ನು ಪಕ್ಷವೇ ತೀರ್ಮಾನ ತೆಗೆದುಕೊಳ್ಳುತ್ತೆ. ನಾನು ಅಥವಾ ಸಿಎಂ ರಾಜೀನಾಮೆ ನೀಡಬೇಕು ಅಂತ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ, ಕನಸಿನಲ್ಲೂ ಅದನ್ನೆಲ್ಲ ಯೋಚನೆ ಮಾಡಬೇಡಿ ಎಂದು ಹೇಳಿದರು.

ನಾನು ಪಾರ್ಟಿಗೆ ಲಾಯಲ್. ಅದಕ್ಕಾಗಿ ಯಡಿಯೂರಪ್ಪನನ್ನು ವಿರೋಧಿಸಿದ್ದೆ

ಅವರು ಯಾವ ಭಾಷೆ ಬಳಸಿದ್ರೋ ಹಾಗೇ ನಾನು ಅದೆ ಭಾಷೆಯಲ್ಲಿ ಉತ್ತರಿಸಿದ್ದೇನೆ. ಕೆಲವರು ಯಡಿಯೂರಪ್ಪ, ಈಶ್ವರಪ್ಪ ನಡುವೆ ಹಳೆ ದ್ವೇಷ ಇದೆ ಅಂತಿದ್ದಾರೆ. ಆದರೆ, ಅಂದಿನಿಂದಲೂ ನಾನು ಪಾರ್ಟಿಗೆ ಲಾಯಲ್. ಅದಕ್ಕಾಗಿ ಅವರನ್ನ ವಿರೋಧಿಸಿದ್ದೆ ಎಂದಿದ್ದಾರೆ. ‌

ನಾನು ಪೋಸ್ಟ್ ಮ್ಯಾನ್ ಅಲ್ಲ

ಈ ಘಟನೆಯಲ್ಲಿ ಯಡಿಯೂರಪ್ಪ ಕುಟುಂಬ ಇದೆಯಾ ಅಂತ ಅವರನ್ನೆ ಕೇಳಿ. ನಾನು ಪೋಸ್ಟ್ ಮ್ಯಾನ್ ಅಲ್ಲ. ಯಾವುದೇ ಇಲಾಖೆ ಮಂತ್ರಿ ಪೋಸ್ಟ್ ಮ್ಯಾನ್ ಅಲ್ಲ. ಇಲಾಖೆಗೆ ಬಂದ ಹಣವನ್ನ ಆ ಇಲಾಖೆಯ ಬಗ್ಗೆ ಮಂತ್ರಿಯೇ ಖರ್ಚು ಮಾಡಬೇಕು. ಅದನ್ನ ಹೇಳಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

ನಾನು ರಾಜ್ಯಪಾಲರ ಬಳಿ ಯಡಿಯೂರಪ್ಪ ವಿರುದ್ದ ದೂರು ಕೊಡಲು ಹೋಗಿಲ್ಲ. ಬದಲಿಗೆ ಅವರು ಗುಜರಾತ್ ಅರ್ಥಮಂತ್ರಿ ಆಗಿದ್ದರು ಅವರ ಬಳಿ ಸಲಹೆ ಕೇಳಲು ಹೋಗಿದ್ದೆ. ಅವರ ಬಳಿ ಹೋಗಿದ್ದು, ತಪ್ಪು ಎಂದು ಅರುಣ್ ಸಿಂಗ್ ಅವರು ಹೇಳಿರಬಹುದು. ಅದು ಅವರ ಅಭಿಪ್ರಾಯ ಅಷ್ಟೇ. ಆದರೆ, ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಕೆಲವರನ್ನ ತುಂಬಾ ನಂಬಿದ್ದಾರೆYeddyurappa-Some-thought-Away-Minister-K.S.Eshwarappaಕೆಜೆಪಿ‌ ಶುರು ಮಾಡಬೇಕು ಅಂದ್ರು ನಾ ಬೇಡ ಅಂದೆ. ಆಗ ನಾವು ಬಿಸೆನೆಸ್ ಪಾರ್ಟ್ನರ್ಸ್ ಆಗಿದ್ದೆವು. ಅವರಿಗೆ 6 ಬಂತು ನಮಗೆ 40 ಬಂತು. ಆ ನಂತರ ಮತ್ತೆ ಅವರ ಮಗನ ಮೂಲಕ ಮತ್ತೆ ಬಿಜೆಪಿಗೆ ಬರುತ್ತೇನೆ ಅಂದರು. ಆಗ ನಾನು ಹೇಳಿದೆ ನೋಡಿ ಹೋಗಿ ವಾಪಸ್ ಬರೋದು ಎಷ್ಟು ಸಮಸ್ಯೆ ಅಂತ. ಅದಕ್ಕೆ ಅವರು ಹೇಳಿದರು, ನೀವು ಪಾರ್ಟಿ ಕಟ್ಟಿ ನಾವು ಜೊತೆ ಇರ್ತಿನಿ ಅಂದಿದ್ದರು. ಆದರೆ. ಪಾರ್ಟಿ ಕಟ್ಟಿದ ಮೇಲೆ ಯಾರು ಬರಲಿಲ್ಲ. ಯಡಿಯೂರಪ್ಪನವರು ಕೆಲವರನ್ನ ತುಂಬಾ ನಂಬಿದ್ದಾರೆ. ಅದೆ ಅವತ್ತಿನ ಕೆಜೆಪಿ ಕಟ್ಟಲು ಕಾರಣ. ಈಗಲೂ ಅದೆ ಥರ ಆಗಿದೆ ಅನ್ನೋದೆ ನನ್ನ ಅಭಿಪ್ರಾಯ ಎಂದು ಅನುಮಾನವ್ಯಕ್ತಪಡಿಸಿದ್ದಾರೆ.

 

key words : Yeddyurappa-Some-thought-Away-Minister-K.S.Eshwarappa