ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು? ಹೆಚ್.ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ.

Promotion

ಮಂಡ್ಯ,ನವೆಂಬರ್,18,2023(www.justkannada.in): ಯತೀಂದ್ರ ಸಿದ್ಧರಾಮಯ್ಯ  ಮಾತನಾಡಿರುವ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ವಿಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು. ಯತೀಂದ್ರ ವರುಣ ಕ್ಷೇತ್ರದ ಮಾಜಿ ಶಾಸಕ, ಅವರ ತಂದೆ ಸಿಎಂ. ಹೀಗಿರುವಾಗ ಆ ಕ್ಷೇತ್ರದ ಕೆಲಸವನ್ನು ನೋಡಿಕೊಂಡರೆ ತಪ್ಪೇನು? ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು?  ಸಾರ್ವಜನಿಕರೇ ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಅಂತಾರೆ. ಕುಮಾರಸ್ವಾಮಿ ಕುಟುಂಬದವರು ಅಧಿಕಾರದಲ್ಲಿದ್ದಾಗ ಏನು ಮಾಡಿಲ್ವೇ? ಎಂದು ಕುಟುಕಿದರು.

ಮಾಜಿ ಸಿಎಂ ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹೆಚ್​.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರೆ ನಿಭಾಯಿಸಲು ಆಗಲ್ಲ. ಕುಮಾರಸ್ವಾಮಿ ನೆಮ್ಮದಿಯಿಂದ ಇರಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ  ಹರಿಹಾಯ್ದರು.

Key words: Yathindra siddaramaiah-Minister –Chaluvarayaswamy- against -HDK.