ಯಾಸ್ ಚಂಡಮಾರುತ: ಇಂದು ಹಿರಿಯ ಅಧಿಕಾರಿಗಳ ಸಭೆ ನಡೆಸಲಿರುವ ಪ್ರಧಾನಿ ಮೋದಿ

Promotion

ಬೆಂಗಳೂರು, ಮೇ 23, 2021 (www.justkannada.in): ಯಾಸ್ ಚಂಡಮಾರುತದ ಪರಿಹಾರ ಕಾರ್ಯಗಳ ಸಿದ್ಧತೆ ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಪ್ರಧಾನಮಂತ್ರಿಯವರು ಇಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿಎಂಎ), ದೂರಸಂಪರ್ಕ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸಚಿವರು ಸಹ ಸಭೆಯಲ್ಲಿ ಸೇರಲಿದ್ದಾರೆ.ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಇಂದು ಯಾಸ್ ಚಂಡಮಾರುತ ಅಪ್ಪಳಿಸಲಿದೆ.