ಯಲಹಂಕ ಮೇಲ್ಸೇತುವೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೆಸರಿಡುವಂತೆ ಕಾಂಗ್ರೆಸ್ ಪಕ್ಷದಿಂದ ಸಿಎಂಗೆ ಪತ್ರ…

Promotion

ಬೆಂಗಳೂರು,ಜೂ,1,2020(www.justkannada.in): ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿ ಜೂನ್ 1ಕ್ಕೆ 25 ವರ್ಷ ಪೂರೈಸಿರುವ ಹಿನ್ನೆಲೆ ಇದರ ಸ್ಮರಣಾರ್ಥವಾಗಿ ಯಲಹಂಕ ಮೇಲ್ಸೇತುವೆಗೆ ಹೆಚ್.ಡಿ ದೇವೇಗೌಡರ ಹೆಸರಿಡುವಂತೆ ಸಿಎಂ ಬಿಎಸ್ ವೈಗೆ  ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ ಅಧ್ಯಕ್ಷ ಸಿ.ಎಂ  ಧನಂಜಯ ಪತ್ರ ಬರೆದು ಮನವಿ ಮಾಡಿದ್ದಾರೆ. yalahanka –fly over- former Prime Minister -HD Deve Gowda –name-congress

 yalahanka –fly over- former Prime Minister -HD Deve Gowda –name-congress

 yalahanka –fly over- former Prime Minister -HD Deve Gowda –name-congress

ಪಕ್ಷಾತೀತ, ಸಿದ್ದಾಂತಕ್ಜೆ ಅತೀತವಾದ ನಿರ್ಧಾರ ಕೈಗೊಂಡು  ಯಲಹಂಕ ಮದರ್ ಡೇರಿ ಬಳಿಯ ನೂತನ ಮೇಲು ಸೇತುವೆಗೆ ಮಾಜಿ ಪ್ರಧಾನಿ ದೇವೇಗೌಡರ ಹೆಸರು ನಾಮಕರಣ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ.ಎಂ . ಧನಂಜಯ ಒತ್ತಾಯ ಮಾಡಿದ್ದಾರೆ.

ಪ್ರಧಾನಿ ಪಟ್ಟವನ್ನ ಅಲಂಕರಿಸಿ ನಮ್ಮ ನಾಡಿಗೆ  ಹೆಚ್.ಡಿ ದೇವೇಗೌಡರು ಕೀರ್ತಿ ತಂದಿದ್ದಾರೆ.  ಈ ಮೂಲಕ ಕನ್ನಡಿಗರ ಆಸ್ಮಿತೆಯನ್ನ ಭಾರತ ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದು ದೇಶ, ರಾಜ್ಯದ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ. ಹೀಗಾಗಿ ಯಲಹಂಕ ಮೇಲ್ಸೇತುವೆಗೆ ಹೆಚ್.ಡಿ ದೇವೇಗೌಡರ ಹೆಸರಿಡಿ ಎಂದು ಮನವಿ ಸಲ್ಲಿಸಿದ್ದಾರೆ.

Key words: yalahanka –fly over- former Prime Minister -HD Deve Gowda –name-congress