ಕವಿ, ಸಾಹಿತಿ ಡಾ ಸಿದ್ಧಲಿಂಗಯ್ಯ ಅವರ ಚಿಂತನೆಗಳು ಸದಾ ಉಳಿಯಬೇಕು- ಅಂತಿಮ ದರ್ಶನ ಪಡೆದ ಸಚಿವ ಆರ್.ಅಶೋಕ್.

Promotion

ಬೆಂಗಳೂರು,ಜೂನ್,12,2021(www.justkannada.in):  ಕವಿ ಸಾಹಿತಿ ಡಾ.ಸಿದ್ಧಲಿಂಗಯ್ಯ ಅಜಾತಶತ್ರು, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಚಿಂತನೆಗಳು ಸದಾ ಉಳಿಯಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ನುಡಿದರು.

ದಲಿತ ಕವಿ ಡಾ.ಸಿದ್ಧಲಿಂಗಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಚಿವ ಆರ್.ಅಶೋಕ್,  ಸಿದ್ಧಲಿಂಗಯ್ಯ ನನಗೆ ಆತ್ಮೀಯರಾಗಿದ್ದರು. ಸಿದ್ಧಲಿಂಗಯ್ಯ ಅವರಿಗೆ ನಾನೂ ಅಭಿಮಾನಿಯಾಗಿದ್ದೆ.  ಎಲ್ಲರ ಜತೆಯೂ ಪ್ರೀತಿಯಿಂದ ಮಾತನಾಡುತ್ತಿದ್ದರು ಎಂದರು.

ನಿಸಾರ್ ಅಹ್ಮದ್ ಅವರ ಅಧ್ಯಯನ ಕೇಂದ್ರದಂತೆ ಅದೇ ರೀತಿ ಡಾ.ಸಿದ್ಧಲಿಂಗಯ್ಯ ಅಧ್ಯಯನ ಕೇಂದ್ರ ತೆರೆಯಲು ಸರ್ಕಾರ ಮತ್ತು ನನ್ನ ಇಲಾಖೆಯಿಂದ ವ್ಯವಸ್ಥೆ ಮಾಡುತ್ತೇವೆ. ಈ ಬಗ್ಗೆ ಕುಟುಂಬದ ಜತೆ ಮಾತನಾಡುತ್ತೇವೆ ಎಂದರು.

Key words:  writer-Dr Siddhalingaiah –dead-minister R. Ashok