ವಿಶ್ವ ಕುಸ್ತಿ: ದೀಪಕ್‌ ಪೂನಿಯಾಗೆ ನಂಬರ್ ಒನ್ ಪಟ್ಟ

Promotion

ಹೊಸದಿಲ್ಲಿ, ಸೆಪ್ಟೆಂಬರ್ 28, 2019 (www.justkannada.in): ದೀಪಕ್‌ ಪೂನಿಯಾ ನೂತನ ವಿಶ್ವ ಕುಸ್ತಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ ಗೌರವ ಪಡೆದಿದ್ದಾರೆ.

ಅವರು 86 ಕೆಜಿ ವಿಭಾಗದಲ್ಲಿ ವಿಶ್ವದ ನಂಬರ್‌ ವನ್‌ ಕುಸ್ತಿಪಟು ಎನಿಸಿದ್ದಾರೆ. ಆದರೆ 65 ಕೆಜಿ ವಿಭಾಗದಲ್ಲಿ ಅಗ್ರ ರ್‍ಯಾಂಕಿಂಗ್‌ ಹೊಂದಿದ್ದ ಭಜರಂಗ್‌ ಪೂನಿಯಾ ಈ ಸ್ಥಾನ ಕಳೆದುಕೊಂಡಿದ್ದಾರೆ.

ವನಿತಾ ವಿಭಾಗದಲ್ಲಿ ವಿನೇಶ್‌ ಪೋಗಟ್‌ ನಂ.2 ಆಗಿದ್ದಾರೆ. 20ರ ಹರೆಯದ, ಇದೇ ಮೊದಲ ಸಲ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಅಖಾಡಕ್ಕಿಳಿದಿದ್ದ ದೀಪಕ್‌ ಪೂನಿಯಾ ಕಾಲಿನ ನೋವಿನಿಂದಾಗಿ ಫೈನಲ್‌ ಪಂದ್ಯದಿಂದ ಹೊರಗುಳಿದಿದ್ದರು.