ಕನ್ನಡ ಚಿತ್ರಕ್ಕೆ ವಿಶ್ವ ದಾಖಲೆಯ ಪ್ರಮಾಣ ಪತ್ರ

Promotion

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಪ್ರಯೋಗಾತ್ಮಕ ಚಿತ್ರ ‘ಬಿಂಬ-ಆ 90 ನಿಮಿಷಗಳು’. ಚಿತ್ರಕ್ಕೀಗ ವಿಶ್ವ ದಾಖಲೆಯ ಪ್ರಮಾಣ ಪತ್ರ ಸಿಕ್ಕಿದೆ.

ಹಿರಿಯ ನಿರ್ದೇಶಕ ಜಿ. ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ ಒಬ್ಬರೇ ನಟಿಸಿದ್ದಾರೆ. ವಿಶೇಷವೆಂದರೆ, ಇವರಿಬ್ಬರೂ ಬಹುಕಾಲದ ಸ್ನೇಹಿತರು.

ಕೆಲವು ವರ್ಷಗಳ ಹಿಂದೆ ಶ್ರೀನಿವಾಸ ಪ್ರಭು ಒಂದೂವರೆ ಗಂಟೆಯ ಏಕಾಭಿನಯ ಮಾಡಿದ್ದರು. ಈ ನಾಟಕವು 250 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿದ ಯೋಧರ ಜೀವನವನ್ನು ಆಧರಿಸಿತ್ತು.

ಇದರಲ್ಲಿ ಶ್ರೀನಿವಾಸ್ ಮೂರ್ತಿರವರ ಪ್ರತಿಭೆಯನ್ನು ಕಂಡ ನಿರ್ದೇಶಕರು, ಅದನ್ನು ದೃಶ್ಯರೂಪದಲ್ಲಿ ತಂದಿದ್ದಾರೆ.