ಪರಿಸರ ನಾಶ ಮಾಡಿದರೆ ಮನುಕುಲಕ್ಕೆ ಕಂಟಕ- ರಘು ಆರ್.ಕೌಟಿಲ್ಯ.

Promotion

ಮೈಸೂರು,ಜೂನ್,5,2021(www.justkannada.in): ಇಂದು ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಡಿ.ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೌಟಿಲ್ಯ ರಘು ರವರು  ನಗರದ ಜಲದರ್ಶನಿಯ ಮುಂಭಾಗ ಬಾದಾಮಿ ಗಿಡ ವನ್ನು ನೆಟ್ಟಿ ಅರ್ಥಪೂರ್ಣವಾಗಿ ಆಚರಿಸಲಾಯಿತು.jk

ನಂತರ ಮಾತನಾಡಿದ ರಘು ಕೌಟಿಲ್ಯ ಅವರು ವಿಶ್ವ ಪರಿಸರ ಉಳಿವಿಗಾಗಿ ಪ್ರತಿ ಮನೆಯ ಮುಂಭಾಗ ಗಿಡವನ್ನು  ನೆಡಬೇಕು ಹಾಗೆಯೇ ಕರೋನಾ ಎಂಬಾ ಮಹಾಮಾರಿಯನ್ನು ಹೋಗಲಾಡಿಸಲು ಆಮ್ಲಜನಕದ ಅವಶ್ಯಕತೆ ಇದೆ.  ನಾವು ವಾಸಿಸುವ ಪರಿಸರ ವನ್ನು ಕಲ್ಮಶ ಗೊಳಿಸದೆ ಸ್ವಚತೆಯಿಂದ ನಾಗರೀಕರರಾದ ನಮ್ಮೇಲ್ಲರ ಕರ್ತವ್ಯ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಮೊರ್ಚಾ ದ ನಗರ ಅಧ್ಯಕ್ಷರಾದ ಜೋಗಿಮಂಜು ಮಾತಾನಾಡಿ ವಾಯು ಮಾಲಿನ್ಯ, ಜಲ ಮಾಲಿನ್ಯವನ್ನು ತಡೆಯಲು ಪರಿಸರ ಮುಖ್ಯ, ಯುವ ಪೀಳಿಗೆಯು ಪರಿಸರವನ್ನು ಉಳಿಸುವ ಬೇಕು, ಪರಿಸರ ನಾಶ ಮಾಡಿದರೇ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಕಂಟಕ ವಾಗಲಿದೆ, ಯುವಕರಾದ ನಾವುಗಳು ಪ್ರಕೃತಿಯ ಗಾಳಿ,  ಬೆಳಕುಗಳನ್ನೆ ಮಾನವ ಕುಲ ಅವಲಂಬಿತವಾಗಿರುವರಿಂದ ಪರಿಸರ ಉಳಿಸುವುದು ನಮ್ಮ ಅದಮ್ಯ ಕರ್ತವ್ಯ ಎಂದರು.

ಈ ಸಂಧರ್ಭದಲ್ಲಿ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೌಟಿಲ್ಯ ರಘು,ವಿ.ವಿ.ಪುರಂ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ದಿವಾಕರ್,ಭಾ.ಜ.ಪ.ನಗರ ಪ್ರಧಾನ ಕಾರ್ಯದರ್ಶಿ ಗಿರೀಧರ್,ಹಿಂದುಳಿದ ವರ್ಗಗಳ ಮೋರ್ಚಾದ ನಗರ ಅಧ್ಯಕ್ಷರಾದ ಜೋಗಿಮಂಜು, ಪ್ರಧಾನ ಕಾರ್ಯದರ್ಶಿ ಗೋಪಾಲ್ ಇದ್ದರು.

Key words: world environment day- mysore -Raghu R. Kautilya-jogi manju