ವಿಶ್ವಕಪ್ ಶೂಟಿಂಗ್: ಬಂಗಾರ ಗೆದ್ದ ಇಳಾವೆನಿಲ್ ವಲರಿವನ್

Promotion

ರಿಯೊ ಡಿ ಜನೈರೊ, ಸೆಪ್ಟೆಂಬರ್ 29, 2019 (www.justkannada.in): ಬೆಜ್ರಿಲ್‍ನಲ್ಲಿ ನಡೆದ ಹಿರಿಯರ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಇಳಾವೆನಿಲ್ ವಲರಿವನ್ ಚೊಚ್ಚಲ ಬಂಗಾರದ ಪದಕ ಗೆದ್ದಿದ್ದಾರೆ.

ರಿಯೊ ಡಿ ಜನೈರೊದಲ್ಲಿ ನಡೆದ ಐಎಸ್‍ಎಸ್‍ಎಫ್ ರೈಫಲ್/ಪಿಸ್ತೂಲ್ ಸ್ಪರ್ಧೆಯಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಗುಜರಾತ್‍ನ ಇಳಾವೆನಿಲ್ ನಿಖರ ಗುರಿ ಸಾಧನೆಯೊಂದಿಗೆ ಅಗ್ರ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಇದು 20 ವರ್ಷದ ಶೂಟರ್‍ಗೆ ಪ್ರಥಮ ವಿಶ್ವಕಪ್ ಸ್ವರ್ಣ ಸಂಭ್ರಮವಾಗಿದೆ. ಈ ವರ್ಷವಷ್ಟೇ ಸೀನಿಯರ್ ವಿಭಾಗಕ್ಕೆ ಬಡ್ತಿ ಪಡೆದಿದ್ದ ಇವರಿಗೆ ಇದು ಮೊದಲ ಭರ್ಜರಿ ಗೆಲುವಾಗಿದೆ.