ವಿಶ್ವಕಪ್ ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ವೆಸ್ಟ್ ಇಂಡೀಸ್’ಗೆ ಮಾಡು ಇಲ್ಲವೇ ಮಡಿ ಪಂದ್ಯ

Promotion

ಮ್ಯಾಂಚೇಸ್ಟರ್ , ಜೂನ್ 22, 2019 (www.justkannada.in): ವಿಶ್ವಕಪ್ ಕ್ರಿಕೆಟ್’ನಲ್ಲಿ ಇಂದು ವೆಸ್ಟ್ ಇಂಡೀಸ್ ತಂಡ ನ್ಯೂಜಿಲ್ಯಾಂಡ್ ಸವಾಲು ಎದುರಿಸಲಿದೆ.

ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿರುವ ನ್ಯೂಜಿಲ್ಯಾಂಡ್ ತಂಡ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಸೆಮಿಫೈನಲ್ ಗೆ ಮತ್ತಷ್ಟು ಹತ್ತಿರವಾಗುವ ಕನಸು ಕಾಣುತ್ತಿದೆ. ಇದರ ಮಧ್ಯೆ ವಿಶ್ವಕಪ್ ನಲ್ಲಿ ಮುಂದಿನ ಹಂತಕ್ಕೇರಲು ವೆಸ್ಟ್ ಇಂಡೀಸ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್, ಹೆಟ್ಮೆಯರ್, ಹೋಲ್ಡರ್, ಶಾಯ್ ಹೋಪ್ ರಂತಹ ಬ್ಯಾಟ್ಸ್ ಮೆನ್ ಗಳಿದ್ದಾರೆ. ಆದರೆ ಇಲ್ಲಿಯವರಗೆ ಅವರಿಂದ ನಿರೀಕ್ಷಿತ ಪ್ರದರ್ಶನ ಸಾಧ್ಯವಾಗದೇ ಇರುವುದು ತಂಡದ ಸೋಲಿಗೆ ಕಾರಣವಾಗಿದೆ.

ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿ ವೆಸ್ಟ್ ಇಂಡೀಸ್ ಯಾವ ರೀತಿ ಗೇಮ್ ಪ್ಲಾನ್ ಮಾಡಲಿದೆ ಎಂಬುದು ಕಾದು ನೋಡಬೇಕು.