ವಿಶ್ವಕಪ್ ಕ್ರಿಕೆಟ್: ಇಂದು ಇಂಗ್ಲೆಂಡ್- ಅಫ್ಗಾನಿಸ್ತಾನ ಪಂದ್ಯ

Promotion

ಲಂಡನ್, ಜೂನ್ 18, 2019 (www.justkannada): ಸೆಮಿಫೈನಲ್‌ನತ್ತ ಹೆಜ್ಜೆಯಿಟ್ಟಿರುವ ಇಂಗ್ಲೆಂಡ್‌ ತಂಡ, ಕೊನೆಯ ಸ್ಥಾನದಲ್ಲಿರುವ ಅಫ್ಗಾನಿಸ್ತಾನ ತಂಡವನ್ನು ಇಂದು ಎದುರಿಸಲಿದೆ.

ಆತಿಥೇಯರಿಗೆ ಕೆಲವು ಆಟಗಾರರು ಗಾಯಾಳಾಗಿರುವುದು ಸಮಸ್ಯೆಯಾಗಿದೆ. ತಂಡದ ಸಾರಥ್ಯ ವಹಿಸಿರುವ ಇಯಾನ್‌ ಮಾರ್ಗನ್‌, ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದ ವೇಳೆ ಬೆನ್ನು ನೋವಿನಿಂದ ಅರ್ಧದಲ್ಲೇ ಕ್ರೀಡಾಂಗಣ ತೊರೆದಿದ್ದರು.

ಅದೇ ಪಂದ್ಯದಲ್ಲಿ ಆರಂಭ ಆಟಗಾರ ಜೇಸನ್‌ ರಾಯ್‌ ಕೂಡ ಮೊಣಕಾಲಿನ ಸ್ನಾಯುರಜ್ಜು ನೋವಿನಿಂದ ಬಳಲಿ ಪೂರ್ಣ ಪಂದ್ಯ ಆಡಲಾಗಲಿಲ್ಲ. ಮಂಗಳವಾರ ಆಡುವ ಬಗ್ಗೆ ಮಾರ್ಗನ್‌ಗೇ ಸಂದೇಹವಿದೆ. ಅಫ್ಗಾನಿಸ್ತಾನ ತಂಡ ಕೂಡ ಕಠಿಣ ಪೈಪೋಟಿ ನೀಡಲು ಸಜ್ಜಾಗಿದೆ.