ವಿಶ್ವಕಪ್ ಕ್ರಿಕೆಟ್: ಗೆಲುವಿಗಾಗಿ ಬಾಂಗ್ಲಾ-ನ್ಯೂಜಿಲ್ಯಾಂಡ್ ಸೆಣೆಸಾಟ

Promotion

ಲಂಡನ್, ಜೂನ್ 06, 2019 (www.justkannada.in):

ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ನ್ಯೂಝಿಲ್ಯಾಂಡ್ ತಂಡ ಬುಧವಾರ ನಡೆಯಲಿರುವ ವಿಶ್ವಕಪ್‌ನ 9ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.ಆಡಿರುವ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಜಯ ಗಳಿಸಿವೆ. ಶ್ರೀಲಂಕಾ ವಿರುದ್ಧ ನ್ಯೂಝಿಲ್ಯಾಂಡ್ 10 ವಿಕೆಟ್‌ಗಳ ಜಯ ಗಳಿಸಿತ್ತು. ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಬಾಂಗ್ಲಾದೇಶ 21 ರನ್‌ಗಳ ಅಂತರದಲ್ಲಿ ಸೋಲಿಸಿತ್ತು.

ಕೇನ್ ವಿಲಿಯಮ್ಸನ್ ಬಾಂಗ್ಲಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಅಭಿಯಾನ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಬಾಂಗ್ಲಾ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅದು ಕೂಡಾ ಆಫ್ರಿಕದ ವಿರುದ್ಧ ಜಯಗಳಿಸಿರುವಂತೆ ನ್ಯೂಝಿಲ್ಯಾಂಡ್‌ನ್ನು ಮಣಿಸಲು ನೋಡುತ್ತಿದೆ. ತಂಡದ ಬೌಲರ್‌ಗಳು ಆತ್ಮವಿಶ್ವಾಸದಲ್ಲಿದ್ದಾರೆ. ಕಿವೀಸ್‌ನ ಬೌಲರ್‌ಗಳು ಉತ್ತಮ ಫಾರ್ಮ್ ನಲ್ಲಿದ್ದಾರೆ.