ಮೈಸೂರಿನಲ್ಲಿ ವಿಶ್ವ ಯೋಗ ದಿನಕ್ಕೆ ತಾಲೀಮು: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ನೀರಸ ಪ್ರತಿಕ್ರಿಯೆ..

ಮೈಸೂರು,ಜೂ,19,2019(www.justkannada.in): ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ. ಈ ಹಿನ್ನೆಲೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ವಿಶ್ವ ಯೋಗ ದಿನಕ್ಕೆ ತಾಲೀಮು ನಡೆಸಲಾಯಿತು. ಆದರೆ ತಾಲೀಮಿಗೆ ಜನಪ್ರತಿನಿಧಿಗಳೇ ಮಾಸ್ ಬಂಕ್ ಹಾಕಿದ್ದರು.

ಮೈಸೂರಿನ ಅರಮನೆ ಆವರಣದಲ್ಲಿ  ವಿಶ್ವಯೋಗ ದಿನದ ತಾಲೀಮು ನಡೆಯಿತು. ಈ ತಾಲೀಮಿನಲ್ಲಿ ಮೇಯರ್ ಪುಷ್ಪಾಲತಾ ಜಗನ್ನಾಥ್ ಸೇರಿದಂತೆ 17 ಸದಸ್ಯರು ಮಾತ್ರ ಭಾಗಿಯಾಗಿದ್ದರು. ಈ ವೇಳೆ ಬರೋಬ್ಬರಿ 48 ಸದಸ್ಯರು ಸಾಮೂಹಿಕವಾಗಿ ಗೈರಾಗಿದ್ದರು.

ಇನ್ನು ತಾಲೀಮಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್  ಪಾಲ್ಗೊಂಡಿದ್ದರು. ಆಯುಕ್ತೆ ಶಿಲ್ಪಾ ನಾಗ್ ಸೇರಿ ಬೆರಳೆಣಿಗೆಯಷ್ಟು ಅಧಿಕಾರಿಗಳು ಹಾಜರಿದ್ದರು.  ಶಿಲ್ಪನಾಗ್ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನೋಡಲ್ ಅಧಿಕಾರಿಯೂ ಆಗಿದ್ದಾರೆ.

ಯೋಗ ತಾಲೀಮಿಗೆ ಮಹಾನಗರ ಪಾಲಿಕೆ ಸದಸ್ಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂಜಾನೆ ದೇಹ ದಂಡಿಸಲು ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಆಲಸ್ಯ ವಹಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಇನ್ನು   ಜೂನ್ ೨೧ರಂದು ರೇಸ್ ಕ್ಲಬ್ ಆವರಣದಲ್ಲಿ ಯೋಗ ದಿನ ನಡೆಯಲಿದ್ದು  ಈ ಹಿನ್ನೆಲೆಯಲ್ಲಿ ಪೂರ್ವಾಭ್ಯಾಸವನ್ನ  ಪಾಲಿಕ ಆಯೋಜಿಸಿತ್ತು. ಯೋಗಾಭ್ಯಾಸ ಆಯೋಜಿಸಿ ಪಾಲಿಕೆ ಮುಜುಗರಕ್ಕೆ ಒಳಗಾದಂತಾಗಿದೆ.

Key words: workout – World Yoga Day – Mysore-Boring reaction