ನಮ್ಮ ಕೆಲಸ ಖಾಯಂ ಮಾಡದಿದ್ದರೇ ವಿಷ ಕುಡಿಯುತ್ತೇವೆ- ಸಿಎಂ ಬೊಮ್ಮಾಯಿ ಮುಂದೆ ಅನುದಾನಿತ ಶಾಲಾ ಶಿಕ್ಷಕರ ಕಣ್ಣೀರು.

Promotion

ಬೆಂಗಳೂರು,ಮಾರ್ಚ್,8,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ತಮ್ಮ ತಮ್ಮ ಬೇಡಿಕೆ ಈಡೇರಿಕೆಗೆ ಹಲವರು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಅನುದಾನಿತ ಶಾಲಾ ಶಿಕ್ಷಕರು ತಮ್ಮ ಸೇವೆಯನ್ನ ಖಾಯಂ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದಾರೆ.

ವಿಧಾನಸೌದದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾದ ಅನುದಾನಿತ ಶಾಲಾ ಶಿಕ್ಷಕರು ತಮ್ಮ ಸೇವೆಯನ್ನ ಖಾಯಂ ಮಾಡಬೇಕು. ಖಾಯಂ ಮಾಡದಿದ್ದರೇ ವಿಧಾನಸೌಧದ ಮುಂದೆಯೇ ವಿಷ ಕುಡಿಯುತ್ತೇವೆ ಎಂದು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸುವಾಗ ಕಣ್ಣೀರು ಹಾಕಿದ ಘಟನೆ ನಡೆಯಿತು.

Key words:  work – permanent- -aided- school- teachers – CM Bommai.