ಅಪಘಾತ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ 2 ಕಿಮೀ ಎಳೆದೊಯ್ದ ಮಹಿಳೆ: ದೂರು,  ಪ್ರತಿದೂರು ದಾಖಲು.

Promotion

ಬೆಂಗಳೂರು, ಜನವರಿ, 20,2023(www.justkannada.in): ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದನ್ನ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು ಬೈಕ್ ಸವಾರ 1 ಕಿ. ಮೀ. ಎಳೆದೊಯ್ದ ಘಟನೆ ಮಾಸುವ ಮುನ್ನವೇ ಅಂತಹದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ನಡೆದಿದೆ.

ಹೌದು ಅಪಘಾತ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬರು ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ 2 ಕಿಮೀ ಎಳೆದೊಯ್ದ ಘಟನೆ  ನಗರದ ಉಳ್ಳಾಲ ರಸ್ತೆಯ ಸಿಗ್ನಲ್ ಬಳಿ ನಡೆದಿದೆ. ಪ್ರಿಯಾಂಕ ಎಂಬ ಕಾರು ಚಾಲಕಿ  ದರ್ಶನ್ ಗೆ ಡಿಕ್ಕಿ ಹೊಡೆದಿದ್ದು, ಆತ ಕಾರಿನ ಬಾನೆಟ್ ಮೇಲೆ ಬಿದ್ದರೂ ಕಾರು ನಿಲ್ಲಿಸದೇ ಸಾಗಿದ್ದಾಳೆ.

ಕಾರಿನ ಬಾನೆಟ್ ಮೇಲೆ  ವ್ಯಕ್ತಿ ದರ್ಶನ್ ಇದ್ದರೂ ಸುಮಾರು 2 ಕಿ. ಮೀ. ದೂರ ಕಾರು ಓಡಿಸಿಕೊಂಡು ಹೋಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನಡುವೆ ಮಹಿಳೆ ವಿರುದ್ಧ ದರ್ಶನ್ ದೂರು ನೀಡಿದ್ದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗಯೇ ಮಹಿಳೆಯೂ ಸಹ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಗ್ಯಾಂಗ್ ಹಾಗೂ ಮಹಿಳೆ ಮತ್ತು ಆಕೆಯ ಪತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  woman-dragged- man – 2 km -bonnet – car