ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಬಿದ್ದು ಮಹಿಳೆ ಸಾವು.

Promotion

ಮೈಸೂರು,ಸೆಪ್ಟಂಬರ್,1,2022(www.justkannada.in): ನಾಲೆಗೆ ಬಟ್ಟೆ ತೊಳೆಯಲು ಹೋಗಿ ನೀರಲ್ಲಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ  ಹುಣಸೂರಿನ ಹಿರಿಕ್ಯಾತನಹಳ್ಳಿಯಲ್ಲಿ ನಡೆದಿದೆ.

ಜಯಮ್ಮ(61) ಮೃತಪಟ್ಟ ಮಹಿಳೆ. ಹಾರಂಗಿ ನಾಲೆಯ ಉಪಕಾಲುವೆಯಲ್ಲಿ  ಬಟ್ಟೆ ತೊಳೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ. ಬಟ್ಟೆ ತೊಳೆಯುವಾಗ ತಲೆ ಸುತ್ತು ಬಂದು ಮಹಿಳೆ ನೀರಿಗೆ ಬಿದ್ದಿದ್ದು, ಈ ವೇಳೆನೀರಿನಲ್ಲಿ ತೇಲುತ್ತಿದ್ದನ್ನ ಕಂಡ ಪಾದಚಾರಿಗಳು ಮನೆಗೆ ವಿಷಯ ಮುಟ್ಟಿಸಿದ್ದರು.

ಸ್ಥಳಕ್ಕೆ ಧಾವಿಸಿದ  ಗ್ರಾಮಸ್ಥರು ಶವವನ್ನ ಹೊರತೆಗೆದಿದ್ದಾರೆ.

Key words:  woman- died – wash- clothes – canal-hunsur