ಉಸಿರುಗಟ್ಟಿಸಿ ಮಹಿಳೆ ಕೊಲೆ: ಪತಿ ವಿರುದ್ದ ಆರೋಪ…

Promotion

ಚಿತ್ರದುರ್ಗ,ಮೇ,16,2019(www.justkannada.in): ಮಹಿಳೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನಡೆದಿದೆ.

ಹೊಸದುರ್ಗ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೋಭಾ(27) ಹತ್ಯೆಯಾದ ಮಹಿಳೆ. ಮನೆ ಮುಂದೆ ಮಲಗಿದ್ದಾಗ ಉಸಿರುಗಟ್ಟಿಸಿ ಮಹಿಳೆಯನ್ನ ಹತ್ಯೆ ಮಾಡಲಾಗಿದೆ. ಮೃತ ಶೋಭಾ ಪೋಷಕರು ಪತಿ ಕರಿಯಪ್ಪ ವಿರುದ್ದ ಕೊಲೆ ಆರೋಪಿ ಮಾಡಿದ್ದಾರೆ.

ಕೊಲೆ ಬಳಿಕ ಪತಿ ಕರಿಯಪ್ಪ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  woma murder-  Allegation -against -her -husband