ಅಕ್ಟೋಬರ್ 14ರಿಂದ 26ರವರೆಗೆ ಚಳಿಗಾಲದ ಅಧಿವೇಶನ-ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ…

Promotion

ಬೆಂಗಳೂರು,ಸೆ,18,2019(www.justkannada.in): ಮುಂದಿನ ತಿಂಗಳು  14 ರಿಂದ 26 ರವರೆಗೆ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಡಿಸಿಎಂ ಅಶ್ವಥ ನಾರಾಯಣ್ ಮತ್ತು  ಕಾನೂನು ಸಚಿವ ಮಾಧುಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಅಕ್ಟೋಬರ್  14 ರಿಂದ 26 ರವರೆಗೆ ಬೆಂಗಳೂರಿನಲ್ಲೇ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ. ಬೆಳಗಾವಿಯಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಮೈತ್ರಿ ಸರ್ಕಾರದ ಬಜೆಟ್ ಅನ್ನೇ ಮುಂದುವರೆಸುತ್ತೇವೆ. ಅಧಿವೇಶನದಲ್ಲಿ ಬಜೆಟ್ ಗೆ ಒಪ್ಪಿಗೆ ಪಡೆಯುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಇನ್ನು ದಂಡದ ಮೊತ್ತವನ್ನು ಕಡಿಮೆ ಮಾಡುವ ಬಗ್ಗೆ ಅಭಿಪ್ರಾಯ ನೀಡಲು ಕಾನೂನು ಇಲಾಖೆಗೆ ಸೂಚಿಸಲಾಗಿದೆ. ನಾವು ಇಂದು ಅಥವಾ ನಾಳೆ ಬೆಳಿಗ್ಗೆ  ವೇಳೆಗೆ ಅಭಿಪ್ರಾಯ ತಿಳಿಸಲಾಗುತ್ತದೆ  ಎಂದು ಹೇಳಿದರು.

Key words:  Winter session – October-14th to 26th-Minister -JC Madhuswamy