ಡಿ.7ರಿಂದ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ- ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ…

Promotion

ಬೆಂಗಳೂರು,ನವೆಂಬರ್,18,2020(www.justkannada.in):  ಡಿಸೆಂಬರ್ 7ರಿಂದ ಡಿಸೆಂಬರ್ 15ರವರಗೆ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ ನೀಡಿದರು.kannada-journalist-media-fourth-estate-under-loss

ಇಂದು ವಿಧಾನಸೌಧಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕೇವಲ 10 ನಿಮಿಷದಲ್ಲಿ ಸಂಪುಟ ಸಭೆ ಅಂತ್ಯವಾಯಿತು. ಸಭೆ ಬಳಿಕ ಮಾತನಾಡಿ ಕಾನೂನು ಸಚಿವ ಮಾಧುಸ್ವಾಮಿ, ಡಿ.7ರಿಂದ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ. ಇನ್ನು ಎಸ್.ಸಿ ಮತ್ತು ಎಸ್ ಟಿ  ಮೀಸಲಾತಿ ಹೆಚ್ಚಳ ಸಂಬಂಧ ಒಂದು ವಾರದಲ್ಲಿ ಸಚಿವ ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.winter-session-from-dec-7-decision-cabinet-meeting-minister-madhuswamy

ಹಾಗೆಯೇ ಬೆಳಗಾವಿ ನಗರಸಭೆಗೆ 28.5 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಹೊಸಪೇಟೆಯಲ್ಲಿ ಮಾರುಕಟ್ಟೆಗೆ 13.5 ಕೋಟಿ ಮೀಸಲಿಡಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಈ ವರ್ಷ ಸಾರ್ವತ್ರಿಕ ರಜೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

English summary….

Cabinet decides to conduct this year’s winter session from Dec.7 at Vidhana Soudha
Bengaluru, Nov. 18,2020 (www.justkannada.in): The cabinet meeting led by Chief Minister B.S. Yedyurappa was held at the Vidhana Soudha today, which ended in just 10 minutes. Speaking to the press persons after the meeting Law Minister Madhuswamy said that the cabinet had decided to conduct the winter session from December 7 to 15, at the Vidhana Soudha in Bengaluru.
He also said that it has been decided to form a cabinet sub-committee to arrive at a decision regarding increasing the reservation percentage for SC and STs.
It is also decided to release a sum of Rs.28.5 grants to the Belagavi City Corporation. winter-session-from-dec-7-decision-cabinet-meeting-minister-madhuswamy
Key words: Winter Session from Dec. 7 – Decision – Cabinet Meeting-minister- madhuswamy

Key words: Winter Session from Dec. 7 – Decision – Cabinet Meeting-minister- madhuswamy