ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಬರ್ತೇನೆ ಎಂದ ‘ಹಳ್ಳಿ ಹಕ್ಕಿ’: ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆ !

Promotion

ಮೈಸೂರು, ಡಿಸೆಂಬರ್ 21, 2019 (www.justkannada.in): ಹುಣಸೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತರೂ ಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ ಮಾಜಿ ಸಚಿವ ಎಚ್.ವಿಶ್ವನಾಥ್ !

ಹುಣಸೂರು ಮತದಾರರಿಗೆ ಕೃತಜ್ಞತೆ ಹೇಳುವ ಹಿನ್ನೆಲೆಯಲ್ಲಿ ಸಭೆ ನಡೆಸಿದ ವಿಶ್ವನಾಥ್ ಅವರು, ಮೈಸೂರು ಉಸ್ತುವಾರಿಯಾಗಿಯೇ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದು, ಚರ್ಚೆಗೆ ಗ್ರಾಸವಾಗಿದೆ.

ಎಂ.ಎಲ್.ಸಿ. ಆಗುವ ಮೂಲಕ ಮತ್ತೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ಮೈಸೂರು ಉಸ್ತುವಾರಿ ವಹಿಸಿಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಜೊತೆಗೆ ಹುಣಸೂರನ್ನು ಪತ್ಯೇಕ ಜಿಲ್ಲೆ ಮಾಡುವ ಕನಸು ಇನ್ನು ಸತ್ತಿಲ್ಲ. ಹಾಗಾಗಿ ಅದನ್ನು ಪೂರೈಸುವೆ ಎಂದು ಹೇಳಿದ್ದಾರೆ.