ಶಾಸಕರ ರಾಜೀನಾಮೆ ಅಂಗೀಕಾರಕ್ಕೆ  ಬಿಜೆಪಿ ಅವಸರ ಮಾಡುತ್ತಿರುವುದೇಕೆ..? ಸ್ಪೀಕರ್ ರಮೇಶ್ ಕುಮಾರ್ ಕಿಡಿ…

Promotion

ಬೆಂಗಳೂರು,ಜು,11,2019(www.justkannada.in):  ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ…? ಈ ಹಿಂದೆ ತಿಂಗಳು ಕಳೆದಿರುವ ಉದಹಾರಣೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಬಿಜೆಪಿ ಅವರಿಗೆ ಒಂದು ವಾರದಲ್ಲಿ ಅಗಬೇಕಾಗಿರುವ ಕೆಲಸವಾದರೂ ಏನು..? ಜನಸಾಮಾನ್ಯರು ಅವರ ಪಾಡಿಗೆ ಅವರಿದ್ದಾರೆ ಅಲ್ಲವೇ..? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗೆಯೇ  ನಾನು ನನ್ನ ಕುಟುಂಬದ ಜತೆ ಇದ್ದೇನೆ. ವಿಧಾನಸೌಧದಲ್ಲಿ ಬಂದು ಭೇಟಿ ಮಾಡುವವರು ಭೇಟಿ ಮಾಡಬಹುದು.ಇನ್ನು ಅಧಿವೇಶನವನ್ನ ಮುಂದೂಡಲು ಸಾಧ್ಯವಿಲ್ಲ ಎಂದರು.

Key words: Why – BJP-hurrying -accept – resignation –MLAs- Speaker- Ramesh Kumar