“ಯಾರು ಸೌಲಭ್ಯ ವಂಚಿತರಾಗಿದ್ದಾರೋ ಅವರಿಗೆ ಸೌಲಭ್ಯ ನೀಡಬೇಕು” : ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ

Promotion

ಮೈಸೂರು,ಫೆಬ್ರವರಿ,14,2021(www.justkannada.in) : ಮೀಸಲಾತಿಗಾಗಿ ಎಲ್ಲ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ. ನಿನ್ನೆ‌ ಮೊನ್ನೆಯಿಂದ ಕೋರಿಕೆಗಳ ಮಹಾರಪೂರ ಬೆಳೆಯುತ್ತಿದೆ. ಯಾರು ಸೌಲಭ್ಯ ವಂಚಿತರಾಗಿದ್ದಾರೋ ಅವರಿಗೆ ಸೌಲಭ್ಯ ನೀಡಬೇಕು ಎಂದು ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.jkಮೈಸೂರಿನ ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಮೀಸಲಾತಿಗಾಗಿ ಸಮಯದಾಯಗಳ ಹೋರಾಟ ವಿಚಾರವಾಗಿ ಮೊದಲ ಬಾರಿಗೆ ಪರೋಕ್ಷವಾಗಿ ಮೀಸಲಾತಿ ಪರವಾಗಿ ಸುತ್ತೂರು ಶ್ರೀ ಮಾತನಾಡಿದ್ದಾರೆ.

ನಾಲ್ಕಾರು ಜನರು ಸೌಲಭ್ಯ ಪಡೆದುಕೊಂಡಿದ್ದಾರೆ ಅಂತಹ ಸೌಲಭ್ಯ ಎಲ್ಲರು ಪಡೆದುಕೊಂಡಿದ್ದಾರೆ ಅಂತಲ್ಲ. 2ಎ ಅಥವ ಬಿಸಿಎ ಯಾವುದೇ ಸೌಲಭ್ಯ ಇರಲಿ ಅದು ಎಲ್ಲರಿಗು ಸಿಗಬೇಕು. ಸೌಲಭ್ಯ ಎಲ್ಲ ಸಮುದಾಯ ತುಳಿತಕ್ಕೊಳಗಾದವರಿಗೆ ಸಿಗಲಿ. ಅವರಿಗೆ ಸೌಲಭ್ಯ ನೀಡೋದು ಸರ್ಕಾರಗಳ‌ ಕರ್ತವ್ಯವಾಗಿದೆ. ಆ ಕರ್ತವ್ಯ ನಿರ್ವಹಿಸೋದು ಸರ್ಕಾರದ ಜವಾಬ್ದಾರಿ ಆಗಿದೆ. ಆ ಕೆಲಸವನ್ನ ಸರ್ಕಾರ ಗಮನಿಸಿ ಮಾಡಲಿ ಎಂದರು.

ವಿಜಯೇಂದ್ರ ಒಳ್ಳೆಯ ಜನನಾಯಕ ಆಗುವ ಲಕ್ಷಣ ಹೊಂದಿದ್ದಾರೆ

ವಿಜಯೇಂದ್ರ ಅವರು ಸಿಎಂ ಮಗ ಅನ್ನೋದಕ್ಕಿಂತ ನಾಡಿಮಿಡಿತ ಅರಿತಿದ್ದಾರೆ. ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಇಂದು ಕಟ್ಟಡದ ಶಿಲಾನ್ಯಾಸ ಮಾಡಿದ್ದಾರೆ. ಇದರಿಂದ ಇನ್ನು ಹೆಚ್ಚಿನ ಜವಾಬ್ದಾರಿ ಅವರ ಮೇಲಿದೆ. ಈ ಕಟ್ಟಡ ಪೂರ್ಣಗೊಳಿಸಲಿ ಎಂದು ಹೇಳಿದರು.

key words : Who-facility-Have been-deprived-Facility-Must give-Sutthuru Sri Desikendra Swamiji