ಉಪ ಚುನಾವಣೆಯಲ್ಲಿ ಗೆಲ್ಲುವ ಅನರ್ಹ ಶಾಸಕರನ್ನು ಮಂತ್ರಿ ಮಾಡ್ತೇನೆ: ಮತ್ತೊಮ್ಮೆ ಪುನರುಚ್ಚಿಸಿದ ಸಿಎಂ ಬಿಎಸ್ವೈ

Promotion

ಬೆಂಗಳೂರು, ನವೆಂಬರ್ 17, 2019 (www.justkannada.in): ಉಪ ಚುನಾವಣೆಯಲ್ಲಿ ಗೆಲ್ಲುವ ಅನರ್ಹ ಶಾಸಕರನ್ನು ಮಂತ್ರಿ ಮಾಡೋದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೆದ್ದವರನ್ನು ಮಂತ್ರಿ ಮಾಡುವುದಾಗಿ ಎಲ್ಲ ಕ್ಷೇತ್ರಗಳಲ್ಲೂ ಹೋಗಿ ಹೇಳ್ತೀನಿ. ಜನ ಅವರನ್ನು ಬೆಂಬಲಿಸದಿರಲು ಕಾರಣವೇ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ದೂರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಿದ್ದರಾಮಯ್ಯ ಆ್ಯಂಡ್ ಕಂಪೆನಿಗೆ ಇಂಥ ದೂರು ಕೊಡೋ ಕೆಲಸ ಬಿಟ್ರೆ ಬೇರೆ ಕೆಲಸ ಏನಿದೆ ? ಚುನಾವಣೆಯಲ್ಲಿ ನಮ್ ಅಭ್ಯರ್ಥಿಗಳು ಗೆದ್ರೆ ಮಂತ್ರಿ ಮಾಡ್ತೇವೆ ಅಂತ ಅನ್ಮೋದ್ರಲ್ಲಿ ಅಪರಾಧ ಏನಿದೆ ?

ನೂರಕ್ಕೆ ನೂರು ಬಿಜೆಪಿ ಅಭ್ಯರ್ಥಿಗಳು ಗೆಲ್ತಾರೆ. ನೂರಕ್ಕೆ ನೂರು ಅವರನ್ನು ಮಂತ್ರಿಗಳನ್ನಾಗಿ ಮಾಡ್ತೇವೆ ಇದಕ್ಕೆ ಚುನಾವಣಾ ಆಯೋಗ ಅಡ್ಡಿ ಮಾಡಕ್ಕಾಗಲ್ಲ ಎಂದು ಹೇಳಿದರು.