ಬೀದರ್ ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಇರುವುದೇ ಅವರ ಪ್ರಶ್ನೆಗೆ ಉತ್ತರ : ಶಾಸಕ ಬಂಡೆಪ್ಪ ಕಾಶಂಪೂರ್ ಟಾಂಗ್…

Promotion

ಬೆಂಗಳೂರು,ಫೆಬ್ರವರಿ,14,2021(www.justkannada.in) : ಜೆಡಿಎಸ್ ಎಲ್ಲಿದೆ ಎನ್ನುತ್ತಾರೆ? ಬೀದರ್ ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಇರುವುದೇ ಅವರ ಪ್ರಶ್ನೆಗೆ ಉತ್ತರ ಎಂದು ಜೆಡಿಎಸ್ ಅಸ್ತಿತ್ವ ಪ್ರಶ್ನಿಸಿದವರಿಗೆ  ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್ ಟಾಂಗ್ ನೀಡಿದರು.

jk

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿಧಾನಸೌಧದಲ್ಲಿ ಜೆಡಿಎಸ್ ಬಾವುಟ ಊರಲು ನಾವು ಪಣತೊಡಬೇಕು. 120 ಸೀಟ್ ಗೆಲ್ಲಲು ನಾವು ಶ್ರಮಪಡಬೇಕು. ಶ್ರಮ ಪಟ್ಟರೆ ಮುಂಬರುವ ಚುನಾವಣೆಯಲ್ಲಿ 120 ಸೀಟ್ ಗಳನ್ನು ಜೆಡಿಎಸ್ ಗೆಲ್ಲಬಹುದು ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ರೈತರ ಬಗ್ಗೆ ಮಾತನಾಡುವವರು ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ ಎಂದರು.

ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎನ್ನುತ್ತಿದ್ದಾರೆWhere-JDS?-JDS-MLA-Bundeppa Kashampur

ಪ್ರಧಾನಿಯವರೇ ದೇವೇಗೌಡರಿಗೆ ಇರುವ ರೈತಪರ ಕಾಳಜಿ ಬಗ್ಗೆ ಮಾತಾಡಿದರು. ಕಾಂಗ್ರೆಸ್ ನವರು ಎಲ್ಲಾ ಭಾಗ್ಯಗಳನ್ನು ತಂದರು. ಆದರೆ ಈಗ ಎಲ್ಲಿದ್ದಾರೆ? ಅವರು 130 ರಿಂದ 78 ಸೀಟ್ ಗೆ ಬಂದಿದ್ದಾರೆ. ಬಿಜೆಪಿ ಅವಧಿಯಲ್ಲೂ ಕೆಲಸಗಳಾಗುತ್ತಿಲ್ಲ. ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎಂದು ಟೀಕಿಸಿದರು.

key words : Where-JDS?-JDS-MLA-Bundeppa Kashampur