ಪ್ರಧಾನಿ ಮೋದಿ ಕಾರ್ಯ ವೈಖರಿ ಮೆಚ್ಚಿ ಬಿಜೆಪಿಗೆ ಬರುತ್ತಿರುವ ಜಿಟಿ ದೇವೇಗೌಡರಿಗೆ ಸ್ವಾಗತ: ‘ಟ್ವಿಟ್ ವೈರಲ್

Promotion

ಮೈಸೂರು,ಜು,15,2019(www.justkannada.in):   ಸಮ್ಮಿಶ್ರ ಸರ್ಕಾರದ ವಿರುದ್ದ ಬಂಡೆದ್ದು ತಮ್ಮ ಶಾಸಕನ ಸ್ಥಾನಕ್ಕೆ  ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದಾರೆ.  ಈ ಮಧ್ಯೆ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ಜೆಡಿಎಸ್ ನ ಸಚಿವ ಜಿ.ಟಿ. ದೇವೇಗೌಡರನ್ನ ಬಿಜೆಪಿಗೆ  ಆಹ್ವಾನಿಸಿ ಬಿಜೆಪಿ ಕಾರ್ಯಕರ್ತರರು ಟ್ವಿಟ್ಟರ್ ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

 ಬಿಜೆಪಿಗೆ ಬರುತ್ತಿರುವ ಜಿ.ಟಿ. ದೇವೇಗೌಡರಿಗೆ ಸ್ವಾಗತ ಎಂಬ ಪೋಸ್ಟ್ ಗಳು  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸಂದೇಶ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ., ಅಪ್ಪ ಮಕ್ಕಳ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿ ಬರುತ್ತಿರುವ ಸಚಿವರು ಜಿ.ಟಿ.ದೇವೇಗೌಡರವರಿಗೆ ಸುಸ್ವಾಗತ, ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಜೀ ರವರು ದೇಶಕ್ಕೆ ನೀಡುತ್ತಿರುವ ಅಪಾರ ಯೋಜನೆಗಳನ್ನು ಇಷ್ಟಪಟ್ಟು ಬಿಜೆಪಿಗೆ ಸೇರುತ್ತಿರುವ ಜಿಟಿಡಿ ರವರಿಗೆ ಸುಸ್ವಾಗತ ಎಂದು ಸ್ವಾಗತಿಸಿ ಪೋಸ್ಟ್ ಮಾಡಲಾಗಿದೆ.

ಇನ್ನು  ನಿಮ್ಮ ಪುತ್ರನಾದ ಹರೀಶ್ ಗೌಡರವರಿಗೆ ಚುನಾವಣೆ ಟಿಕೆಟ್ ನೀಡದ ಜೆಡಿಎಸ್ ಪಕ್ಷ ಇದ್ದು ಸತ್ತಂತೆ. ಸಿಎಂ(ಸಿದ್ದರಾಮಯ್ಯ)ರನ್ನ ಸೋಲಿಸಿದ  ನಿಮ್ಮನ್ನ ಜೆಡಿಎಸ್ ಸರಿಯಾಗಿ ನೋಡಿಕೊಂಡಿಲ್ಲ. ಹುಣಸೂರಿನಲ್ಲಿ ನಿಮ್ಮ ಮಗನಿಗೆ ಟಿಕೆಟ್ ನೀಡದೆ ಮೋಸ ಮಾಡಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ.

Key words: Welcome – BJP’s- GT DeveGowda-BJP –activists- twitter