ಜನರ ಜೀವನ ಉಳಿಸಬೇಕಾದರೇ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆಗೆಯಿರಿ- ಸಂಸದ ಪ್ರತಾಪ್ ಸಿಂಹ ಒತ್ತಾಯ.

Promotion

ಮೈಸೂರು,ಜನವರಿ,19,2022(www.justkannada.in):  ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂಗೆ ಹಲವು ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.  ಈ ಮಧ್ಯೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹ ವೀಕೆಂಡ್ ಕರ್ಫ್ಯೂ ನೈಟ್ ಕರ್ಫ್ಯೂ ತೆಗೆಯುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ವೀಕೆಂಡ್ ಕರ್ಫ್ಯೂ ವಿಧಿಸುವುದಾದರೇ ಲಸಿಕೆ ಏಕೆ ಬೇಕಿತ್ತು. ..? ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ ಸಭೆ ರ್ಯಾಲಿ ನಡೆಸಲಾಗುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಕರ್ಫ್ಯೂ ಯಾಕೆ ರಾಜ್ಯದಲ ಜನರಿಗೆ ಭಯ ಬೀಳಿಸುವುದನ್ನ ಬಿಡಿ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆಗೆಯಿರಿ ಎಂದು ಆಗ್ರಹಿಸಿದ್ದಾರೆ.

ಕರ್ಫ್ಯೂ ನಿಂದಾಗಿ ರಾಜ್ಯದ ಜನರಿಗೆ ತೊಂದರೆಯಾಗುತ್ತಿದೆ ಜೀವ ಉಳಿಸಿಕೊಳ್ಳಲು ವ್ಯಾಕ್ಸಿನ್ ನೀಡಲಾಗಿದೆ. ಜನರ ಜೀವನ ಉಳಿಸಬೇಕಾದರೇ ಕರ್ಫ್ಯೂ ತೆಗೆಯಿರಿ. ಜನರ ಜೀವ ಜೀವನ ಎರಡೂ ಮುಖ್ಯ. ಸಾರ್ವಜನಿಕರ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಜನರಿಗೆ ಆಗುತ್ತಿರುವ ಕಷ್ಟಗಳನ್ನ ಸಿಎಂ ತಡೆಯಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Key words: Weekend Curfew- save- people-  MP-Pratap simha