ಪ್ರಿಯಾಂಕ ಚೋಪ್ರ-ನಿಕ್ ಜೋನಾಸ್’ಗೆ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ !

Promotion

ಮುಂಬೈ, ಡಿಸೆಂಬರ್ 03, 2019 (www.justkannada.in): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕ ನಿಕ್ ಜೋನಾಸ್ ಗೆ ಇಂದು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ.

ಈ ಹಿನ್ನಲೆಯಲ್ಲಿ ಪ್ರಿಯಾಂಕಾ ನಿಕ್ ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ನನ್ನ ಪತಿ ನಿಕ್ ಜೋನಸ್‍ಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಹಾಗೆಯೇ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ನಾವು ತುಂಬಾ ಅದೃಷ್ಟಶಾಲಿ ಎಂದು ಎನಿಸುತ್ತಿದ ಎಂದು ಟ್ವಿಟ್ಟರ್’ನಲ್ಲಿ ಬರೆದುಗೊಂಡಿದ್ದಾರೆ.