ಮೈಸೂರಲ್ಲಿ ಮಾಸ್ಕ್ ಧರಿಸದೇ ಹೊರ ಬಂದ್ರೆ ಜೇಬಿಗೆ ಕತ್ತರಿ ಹುಷಾರು!

Promotion

ಮೈಸೂರು, ಏಪ್ರಿಲ್ 28, 2020 (www.justkannada.in): ಮಾಸ್ಕ್ ಧರಿಸದೇ ಹೊರಬರುವ ಸಾರ್ವಜನಿಕರಿಗೆ ರೂ.100 ದಂಡ ವಿಧಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮನೆಯಿಂದ ಹೊರಗೆ ಬರೋ ಮುನ್ನಾ ಎಚ್ಚರಿಕೆ ವಹಿಸಿ. ಮಾಸ್ಕ್ ಧರಿಸದೇ ಹೊರಗೆ ಬರುವವರಿಗೆ ಶಾಕ್ ಕಾದಿದೆ. ಮಾಸ್ಕ್ ಧರಿಸದೇ ನೀವು ಹೊರಗೆ ಬಂದ್ರೆ ಪೊಲೀಸರಿಂದ ದಂಡ ವಿಧಿಸಲಿದ್ದಾರೆ.

ಹೀಗಾಗಿ ಎಚ್ಚರಿಕೆ ವಹಿಸೋದು ಮರೆಯ ಬೇಡಿ. ಈ ನಿಯಮವನ್ನು ಮೈಸೂರಿನ ಜತೆಗೆ ತುಮಕೂರು ಜಿಲ್ಲಾಢಳಿತ ಜಾರಿಗೆ ತಂದಿದೆ.