ಹಾಸನ ಜಿಲ್ಲೆಯ 7 ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ- ಮಾಜಿ ಸಚಿವ ಹೆಚ್.ಡಿ ರೇವಣ್ಣ.

Promotion

ಹಾಸನ,ಮಾರ್ಚ್,21,2023(www.justkannada.in): ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ 7ಕ್ಕೆ 7 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ರೇವಣ್ಣ,  ದೇವೇಗೌಡರೇ ಹಾಸನ ಟಿಕೆಟ್ ಫೈನಲ್ ಮಾಡ್ತಾರೆ. ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ.  ಜಿಲ್ಲೆಯ 7 ಕ್ಷೇತ್ರಗಳಿಗೂ ಹೆಚ್.ಡಿ ದೇವೇಗೌಡರು ಟಿಕೆಟ್  ಫೈನಲ್ ಮಾಡುತ್ತಾರೆ.  ಹೇಗೆ ಮ್ಯಾಜಿಕ್ ಮಾಡಬೇಕೆಂದು ನಮಗೆ ಗೊತ್ತಿದೆ ಎಂದರು.

ಹಾಸನ  ಜೆಡಿಎಸ್ ಟಿಕೆಟ್ ಗೆ ರಾಜೇಗೌಡ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ರೇವಣ್ಣ ಟಿಕೆಟ್ ಕೋಡುವುದಾಗಿ ಈ ಹಿಂದೆ ಮಾತು ಕೊಟ್ಟಿದ್ವಿ. ಅದ್ದರಿಂದ ರಾಜೇಗೌಡ ಟಿಕೆಟ್ ಕೇಳಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷ ತೀರ್ಮಾನಿಸಲಿದೆ ಎಂದರು.

Key words: We – win – 7 constituencies – Hassan district – Former Minister- HD Revanna.