ಮಂಡ್ಯದಲ್ಲಿ 7 ಸ್ಥಾನವನ್ನೂ ಗೆಲ್ಲುತ್ತೇವೆ- ಸಚಿವ ನಾರಾಯಣಗೌಡ ವಿಶ್ವಾಸ.

Promotion

ಬೆಂಗಳೂರು,ನವೆಂಬರ್,28,2022(www.justkannada.in): ಮಂಡ್ಯದಲ್ಲಿ 7ಕ್ಕೆ 7 ಸ್ಥಾನವನ್ನೂ ಗೆಲ್ಲುತ್ತೇವೆ ಎಂದು ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ನಾರಾಯಣಗೌಡ,  ಒಂದುವರೆ ವರ್ಷದಿಂದ ಸಚ್ಚಿದಾನಂದನಿಗೆ ಗಾಳ ಹಾಕಲಾಗಿತ್ತು. ಬಿಜೆಪಿ ಸೇರ್ಪಡೆಯಿಂದ ಮಂಡ್ಯ ಜಿಲ್ಲೆಗೆ ದೊಡ್ಡ ಶಕ್ತಿ ಬಂದಂತಾಗಿದೆ . ಕೆ.ಆರ್ ಪೇಟೆಯಲ್ಲಿ  ದೊಡ್ಡ ಗೂಂಡಾಗಳು ಇದ್ರು.  ಚುನಾವಣೆಯಲ್ಲಿ ಕಲ್ಲು  ಚಪ್ಪಲಿಯಿಂದ ಹೊಡೆದರು.  ಹಲ್ಲೆಕೋರರಿಗೆ ತಕ್ಕಪಾಠ ಕಲಿಸುತ್ತೇವೆ ಎಂದರು.

ಬಿಜೆಪಿ ಒಳ್ಳೆಯ ಪಕ್ಷ  ಎಂದು ಜೆಡಿಎಸ್ ತೊರೆದು ಬಂದಿದ್ದೇನೆ.  ಮಂಡ್ಯ ಜಿಲ್ಲೆಯಲ್ಲಿ ಯಾರ ಗೂಂಡಾಗಿರಿಯೂ ನಡೆಯಲ್ಲ. ಯಾಕೆಂದರೇ ನಮ್ಮದೇ ಸರ್ಕಾರ ಇದೆ.  ಎಲ್ಲಾ ಗೂಂಡಾಗಳು ಈಗಾಗಲೇ ಮನೆಗೆ ಹೋಗಿದ್ದಾರೆ ಎಂದರು.

Key words: We- will- win- 7 seats – Mandya-Minister -Narayana Gowda