ಮೀಸಲಾತಿಗೆ ಮೊದಲ ಬೇರು ನಾವು: ಬೇರಿಲ್ಲದೇ ಹಣ್ಣಿರುತ್ತಾ..?  ಡಿ.ಕೆ ಶಿವಕುಮಾರ್.

Promotion

ಚಿತ್ರದುರ್ಗ,ಅಕ್ಟೋಬರ್,11,2022(www.justkannada.in):  ಎಸ್ ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗದಲ್ಲಿ ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಮೀಸಲಾತಿ ಹೆಚ್ಚಸಬೇಕು ಎಂದು ಮೊದಲು ಹೇಳಿದ್ದು ನಾವು.  ಮೀಸಲಾತಿಗೆ ಮೊದಲ ಬೇರು ನಾವು.  ಬೇರಿಲ್ಲದೇ ಹಣ್ಣಿರುತ್ತಾ..? ನ್ಯಾ. ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದೇ ನಾವು.  ಮೀಸಲಾತಿಗೆ ನಾವು ಬೆಂಬಲ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಬರೀ ಪೆನ್ನು ಪೇಪರ್ ನಲ್ಲಿ ಮಾತ್ರ ಇರಬಾರದು ಜನರ ಹೋರಾಟ, ಜನರ ನೋವು ಏನಿತ್ತು ಅದಕ್ಕೆ ಬೆಂಬಲಿಸಿ  ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: We – first – reservation- supported-  D.K Shivakumar.